ಮಾಳೂರು ಕ್ರಾಸಿನಲ್ಲಿ ರಾಜಹಂಸ ಬಸ್ ಪಲ್ಟಿ

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಚಾಲಕನ ಆಯತಪ್ಪಿ ಸಾರಿಗೆ ಸಂಸ್ಥೆಯ ರಾಜಹಂಸ ಸ್ಪೀಪರ್ ಕೋಚ್ ಬಸ್ ಗುರುವಾರ ಪಲ್ಟಿಯಾಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಾಲೂಕಿನ ಮಾಳೂರು ಕ್ರಾಸ್ ನಲ್ಲಿ ಘಟನೆ ಸಂಭವಿಸಿದ್ದು, ಚಾಲಕ ಅಶೋಕ್ ಮತ್ತು ಪ್ರಯಾಣಿಕರಾದ ವನಿತಾ, ಹಾಲಮ್ಮ, ರಂಗನಾಥ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!