ಕೊರೊನಾದಿಂದ ಗುಣಮುಖನಾಗಿದ್ದರೂ ಯುವಕ ಸಾವು!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾದಿಂದ ಗುಣಮುಖನಾಗಿದ್ದರೂ 36 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ.

READ | ಸಿಡಿಲು, ಮಳೆಗೆ ನಗರಾದ್ಯಂತ ಕರೆಂಟ್ ಕಟ್, ಎಲ್ಲಿ ಏನು ಆವಾಂತರ?

ಸಾವಿಗೀಡಾದ ಯುವಕನನ್ನು ಸೊರಬ ತಾಲೂಕಿನ ಆನವಟ್ಟಿಯವನೆಂದು ತಿಳಿದುಬಂದಿದೆ. ಏಪ್ರಿಲ್ 2ರಂದು ಯುವಕನಿಗೆ ಕೊರೊನಾ ಸೋಂಕು ತಗಲಿತ್ತು. ತಕ್ಷಣ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸುಧಾರಣೆ ಕಂಡ ಹಿನ್ನೆಲೆ ಏಪ್ರಿಲ್ 8ರಂದು ಬಿಡುಗಡೆ ಮಾಡಲಾಗಿದೆ. ಅದೇ ದಿನ ಆತನ ಅನವಟ್ಟಿಗೆ ಹೋಗಿದ್ದು, ಅಲ್ಲಿಯ ಆರೋಗ್ಯ ಇಲಾಖೆ ಸಿಬ್ಬಂದಿ ಫಾಲೋಪ್ ಮಾಡಿದ್ದಾರೆ. ಒಂದು ವಾರ ವಿಶ್ರಾಂತಿ ಮಾಡುವಂತೆ ನಿರ್ದೇಶನ ಸಹ ನೀಡಿದ್ದಾರೆ. ಆದರೆ, ಆತ ಕೆಲಸ ಮಾಡಿದ್ದು ಬಿಪಿ ಕಡಿಮೆ ಆಗಿದ್ದು, ಈ ಕಾರಣಕ್ಕೆ ಆತ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
400 ದಾಟಿದ‌ ಸೋಂಕಿತರ ಸಂಖ್ಯೆ | ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 403ಕ್ಕೆ ಏರಿಕೆಯಾಗಿದೆ. ಭಾನುವಾರ ಐವರು ವಿದ್ಯಾರ್ಥಿಗಳು ಸೇರಿ ಒಟ್ಟು 52 ಜನರಿಗೆ ಕೊರೊನಾ ಕೊರೊನಾ ಸೋಂಕು ತಗಲಿದೆ.
ತಾಲೂಕುವಾರು ವರದಿ | ಶಿವಮೊಗ್ಗ 21, ಭದ್ರಾವತಿ 9, ಶಿಕಾರಿಪುರ 7, ತೀರ್ಥಹಳ್ಳಿ 2, ಸೊರಬ 3, ಹೊಸನಗರ 2, ಸಾಗರ 7, ಹೊರ ಜಿಲ್ಲೆಯ 1 ಪ್ರಕರಣ ಪತ್ತೆಯಾಗಿವೆ.

https://www.suddikanaja.com/2020/11/09/man-cheats-saying-drdo-jobs-and-took-lakhs-of-amount/

error: Content is protected !!