ಗಮನಿಸಿ ಏಪ್ರಿಲ್ 10ರಿಂದ ಈ ರೈಲಿನ ವೇಳೆ‌ ಬದಲಾವಣೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಏಪ್ರಿಲ್ 10ರಿಂದ ಮೈಸೂರು- ತಾಳಗುಪ್ಪ- ಮೈಸೂರು (ರೈಲು ಸಂಖ್ಯೆ 06295/06296) ಎಕ್ಸ್‌ಪ್ರೆಸ್‌ ವಿಶೇಷ ರೈಲಿನ ವೇಳೆ‌ ಬದಲಾವಣೆ ಆಗಲಿದೆ. ಹೀಗಾಗಿ, ಸಾರ್ವಜನಿಕರು‌ ಸಹರಿಸಬೇಕೆಂದು ರೈಲ್ವೆ ಇಲಾಖೆ ಕೋರಿದೆ.

READ | ಏಪ್ರಿಲ್ 10ರಿಂದ ಮೈಸೂರು-ತಾಳಗುಪ್ಪ ನಡುವೆ ಹೊಸ ಎಕ್ಸ್ ಪ್ರೆಸ್ ರೈಲು ಆರಂಭ, ಕೌಂಟರ್ ಟಿಕೆಟ್ ಲಭ್ಯ

ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ತೆರಳುವ ರೈಲಿನ ಸಮಯದಲ್ಲಿ ಬದಲಾವಣೆ ಇಲ್ಲ. ಆದರೆ, ಅರಸಿಕೆರೆಗೆ ಈ ಮುಂಚೆ ಬೆಳಗ್ಗೆ 8.48ಕ್ಕೆ‌ ತಲುಪುತಿದ್ದ ರೈಲು ಏಪ್ರಿಲ್ 10 ರಿಂದ 8.58ಕ್ಕೆ ತಲುಪಿ 9 ಗಂಟೆಗೆ ಅಲ್ಲಿಂದ‌ ಹೊರಡಲಿದೆ.

ಅದೇ ರೀತಿ, ಶಿವಮೊಗ್ಗ ನಗರ ರೈಲು ನಿಲ್ದಾಣಕ್ಕೆ 10.45ರ ಬದಲಿಗೆ 11ಕ್ಕೆ ತಲುಪಿ 11.05 ಗಂಟೆಗೆ ತಾಳಗುಪ್ಪಕ್ಕೆ ಹೊರಡಲಿದೆ. ತಾಳಗುಪ್ಪದಿಂದ ಮೈಸೂರಿಗೆ ಹೊರಡುವಾಗ ಶಿವಮೊಗ್ಗಕ್ಕೆ ಸಂಜೆ 4.50ರ ಬದಲಾಗಿ 4.40 ಗಂಟೆಗೆ ಆಗಮಿಸಿ‌ 4.45ಕ್ಕೆ ಹೊರಡಲಿದೆ.

error: Content is protected !!