ಈ ಪಡಿತರ ಚೀಟಿ ನಿಮ್ಮಲ್ಲಿದ್ದರೆ ತಕ್ಷಣ ಬದಲಾಯಿಸಿ, ಕಾರಣವೇನು ಗೊತ್ತಾ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯ ಸಂಖ್ಯೆಗಳ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

READ | ಒಂದೇ ದಿನ ಐವರ ಬಲಿ ಪಡೆದ ಕೊರೊನಾ, ಎಲ್ಲೆಲ್ಲಿ ಸಾವು ಇಲ್ಲಿದೆ ಡಿಟೇಲ್ಸ್, ಮೂರು ಹೊಸ ದಾಖಲೆ ಸೃಷ್ಟಿ

ಪಡಿತರ ಚೀಟಿಗಳಲ್ಲಿ ಅಕ್ಷರಾಂಕಿಯ ಅಥವಾ 12 ಅಂಕಿಗಳಿಗಿಂತ ಭಿನ್ನವಾದ ಸಂಖ್ಯೆ ನೀಡಿರುವ ಪಡಿತರ ಚೀಟಿಗಳಿಗೆ ಇದೀಗ 12 ಅಂಕಿಗಳ ಹೊಸ ಸಂಖ್ಯೆ ನೀಡಲಾಗಿದೆ. ಇನ್ನು ಮುಂದೆ ಈ ಸಂಖ್ಯೆಯು ಪಡಿತರ ಚೀಟಿ ಸಂಖ್ಯೆಯಾಗಿ‌ ಬಳಕೆಯಾಗಲಿದೆ ಎಂದು ಇಲಾಖೆ‌ ಪ್ರಕಟಣೆ ತಿಳಿಸಿದೆ.
ಇಲ್ಲಿಗೆ ಭೇಟಿ‌ ನೀಡಿ‌ | ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಚೀಟಿ, ಆಧಾರ್ ಅಥವಾ ಪಡಿತರ ಚೀಟಿ ಸಂಖ್ಯೆ ನೀಡಿದರೆ ಬದಲಾಗಿರುವ ಪಡಿತರ ಚೀಟಿ ಸಂಖ್ಯೆ ಪಡೆಯಬಹುದಾಗಿದೆ. ಬದಲಾದ ಸಂಖ್ಯೆಯನ್ನಹ ಪಡಿತರ ಚೀಟಿಯ ಮೇಲೆ ಬರೆಯಲು ನ್ಯಾಯಬೆಲೆ ಅಂಗಡಿಗಳಿಗೆ ತಿಳಿವಳಿಕೆ ನೀಡಲಾಗಿದೆ. ಇನ್ನು ಮುಂದೆ ಹೊಸ ಪಡಿತರ ಚೀಟಿ ಸಂಖ್ಯೆ ಬಳಸುವಂತೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆಯುವುದು. ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೆ ತಾಲೂಕಿನ ಆಹಾರ ಶಿರಸ್ತೆದಾರ್, ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು. ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ನಿಯಂತ್ರಣ ಕೊಠಡಿ ಸಂಖ್ಯೆ 1967ಕ್ಕೆ ಕರೆ ಮಾಡಿ ದೂರು ದಾಖಲಿಸಲು‌ ತಿಳಿಸಲಾಗಿದೆ.

error: Content is protected !!