2ಎಗೆ ಸೇರಿಸಲು ಸ್ವಾಮೀಜಿಗಳು ವೀರಶೈವ ಲಿಂಗಾಯತ ಸಮಾಜದವರನ್ನು ಒಗ್ಗೂಡಿಸಲಿ’

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜವನ್ನು ಪ್ರವರ್ಗ 2 ಎಗೆ ಸೇರಿಸುವ‌ ನಿಟ್ಟಿನಲ್ಲಿ ಸ್ವಾಮೀಜಿಗಳು ಸಮಾಜ ಬಾಂಧವರನ್ನು‌ ಒಗ್ಗೂಡಿಸಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.

READ | ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರದ ಗ್ರೀನ್ ಸಿಗ್ನಲ್

ನಗರದ ನಂದಿ ವಿದ್ಯಾ ಸಂಸ್ಥೆಯಲ್ಲಿ ನೊಳಂಬ ವೀರಶೈವ ಯುವ ವೇದಿಕೆ, ನಂದಿ ವಿದ್ಯಾ ಸಂಸ್ಥೆ, ನಂದಿ ಮಹಿಳಾ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಭಕ್ತಿ‌ ಹಾಗೂ ದೇಣಿಗೆ ಸಮರ್ಪಣೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆಯೇ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ದನಿ‌ ಎತ್ತಿದರು. ಆದರೆ, ಸಮುದಾಯಲ್ಲಿಯೇ ಪೂರಕ‌ ಬೆಂಬಲ ಸಿಗದೇ ಇದ್ದುದ್ದರಿಂದ ಮೀಸಲಾತಿ ಸಿಗಲಿಲ್ಲ ಎಂದು ತಿಳಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಸಮುದಾಯದ ಅಭಿವೃದ್ಧಿ | ಬಿ.ಎಸ್.ಯಡಿಯೂರಪ್ಪ ಅವರು‌ ಮುಖ್ಯಮಂತ್ರಿ ಆಗಿದ್ದರಿಂದ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿ ಆಗುತ್ತಿದೆ. ಶಿವಮೊಗ್ಗದಲ್ಲಿ ಸಮುದಾಯಕ್ಕೆ 12 ರಿಂದ 15 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ. ಅದರ ಪರಿಣಾಮವಾಗಿ ಇಂದು ಸಮುದಾಯಕ್ಕೆ ಸಂಬಂಧಿಸಿದ ಸಮುದಾಯ ಭವನ‌ ಇತ್ಯಾದಿ ಅಭಿವೃದ್ಧಿ ಕಾಣುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವಣ್ಣನವರು ಕಾಯಕಕ್ಕೆ ಆದ್ಯತೆ‌ ನೀಡಿದ್ದರು. ಅದನ್ನು ಬಲವಾಗಿ‌ ನಂಬುವ ಸಮುದಾಯದ ಪ್ರತಿಯೊಬ್ಬರು ಕಾಯಕ ನಿರತರಾಗಬೇಕು. ನೊಳಂಬ ಸಮುದಾಯಕ್ಕೆ ಬರುವ ದಿನಗಳಲ್ಲಿ ಸಿಎ ಸೈಟ್ ನೀಡಲಾಗುವುದು ಎಂದು ಭರವಸೆ ನೀಡಿದರು.

READ | ಇದು `ಭಾನುಮತಿ’ಯ ಗೋಳಿನ ಕಥೆ, ಇವಳಿಗೆ ಹುಟ್ಟಿದ ಮಕ್ಕಳು ಬದುಕುವುದೇ ಇಲ್ಲ!

ನಂದಿಗುಡಿ ಬೃಹನ್ಮಠ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೊಳಂಬ ವೀರಶೈವ ಯುವ ವೇದಿಕೆ ಅಧ್ಯಕ್ಷ ಜೆ.ಪಿ. ಚಂದ್ರು ಅಧ್ಯಕ್ಷತೆ ವಹಿಸಿದರು. ವಕೀಲ ಡಿ.ಎನ್.ಹಾಲಸಿದ್ದಪ್ಪ ಉಪನ್ಯಾಸ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಶ್ರೀ ಬಸವೇಶ್ವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ‌.ರಾಜಶೇಖರ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಪಿ.ರುದ್ರೇಶ್, ಕಸಾಪ‌ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಕೃಷಿ ಉಪ‌ ನಿರ್ದೇಶಕ ಡಿ.ಎಂ.ಬಸವರಾಜ್, ಜಾನಪದ ಗಾಯಕ ಕೆ.ಯುವರಾಜ್, ಈಶ್ವರ್ ಎಣ್ಣೇರ್ ಎ.ವಿ.ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!