ಪಕ್ಕಾ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಚಿತ್ರ `ಓಲ್ಡ್ ಮಾಂಕ್’, ಫಸ್ಟ್‍ಲುಕ್‍ಗೆ ಅಭಿಮಾನಿಗಳು ಫಿದಾ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಎಂ.ಜಿ.ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ `ಓಲ್ಡ್ ಮಾಂಕ್’ ಸಿನಿಮಾ ಫಸ್ಟ್ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

READ | ಲಖ್ನೌನಲ್ಲಿ ನಡೆದ ರೀಯಲ್ ಘಟನೆ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಲ್ಲಿ ಮಿಂಚಿರುವ ಶಿವಮೊಗ್ಗೆಯ ಪ್ರತಿಭೆಗಳು, ಯಾವುದೀ ಚಿತ್ರ, ಎಂದು ತೆರೆಗೆ?

ಈಗಾಗಲೇ ಚಿತ್ರದ ತೆಲುಗು ಡಬ್ಬಿಂಗ್ ಹಕ್ಕು ಉತ್ತಮ ಬೆಲೆಗೆ ಮಾರಾಟ ಕಂಡಿರುವ `ಓಲ್ಡ್ ಮಾಂಕ್’ ಪಕ್ಕಾ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಎಂದಿದ್ದಾರೆ ಶ್ರೀನಿ.

ಮಾಲಿವುಡ್ ಖ್ಯಾತ ಚಿತ್ರನಟ ನವೀನ್ ಪೌಲಿ ಅವರು ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಶ್ರೀನಿವಾಸ್ ಅವರು ಹೊಸ ಕಥೆಯೊಂದಿಗೆ ಅಭಿಮಾನಿಗಳ ಮನಸ್ಸು ಗೆಲ್ಲಲಿದ್ದಾರೆ.
ನಟಿ ಅದಿತಿ ಪ್ರಭುದೇವ್ ಮತ್ತು ಶ್ರೀನಿವಾಸ್ ಅವರು ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವೃದ್ಧಾಶ್ರಮದ ಕಥೆಯನ್ನೂ ಹೇಳಲಿದ್ದಾರೆ. ಫ್ಯಾಮಿಲಿ ಮನೋರಂಜನೆಯೊಂದಿಗೆ, ರೊಮ್ಯಾಂಟಿಕ್ ಕಾಮಿಡಿ ಸಹ ಸಿನಿಮಾದಲ್ಲಿದೆ.
ಚಿತ್ರದಲ್ಲಿ ಹಿರಿಯ ನಟರಾದ ಸುದೇವ್ ನಾಯರ್, ಎಸ್.ನಾರಾಯಣ್, ಸಿಹಿಕಹಿ ಚಂದ್ರು ಇತರರಿದ್ದಾರೆ.

error: Content is protected !!