ಇನ್ಮುಂದೆ ಆನ್ಲೈನ್ ನಲ್ಲೇ ಪಾವತಿಸಬಹುದು‌ ಆಸ್ತಿ ತೆರಿಗೆ, ಅದಕ್ಕಾಗಿ ಹೀಗೆ ಮಾಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯು 2021-22ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾಲಿಕೆಯ ಟ್ಯಾಕ್ಸ್‌ ಕ್ಯಾಲ್ಕ್ಯುಲೇಟರ್‌ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

READ | ಈ ಪಡಿತರ ಚೀಟಿ ನಿಮ್ಮಲ್ಲಿದ್ದರೆ ತಕ್ಷಣ ಬದಲಾಯಿಸಿ, ಕಾರಣವೇನು ಗೊತ್ತಾ?

ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ನೇರವಾಗಿ ಪಾವತಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಆನ್‍ ಲೈನ್ ತಂತ್ರಾಂಶ, ಯುಪಿಐ ಮೊಬೈಲ್ ಆ್ಯಪ್ (PAYTM, PHONEPAY, GOOGLE PAY ಇತ್ಯಾದಿ ) ಗಳ ಮೂಲಕ ಪಾವತಿಸಲು ಅವಕಾಶ ನೀಡಿದೆ.
ಲಾಕ್‍ಡೌನ್ ತೆರವಾದ ನಂತರ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ತಿಳಿಸಲಾಗುವುದು. ಆಸ್ತಿ ಮಾಲೀಕರು, ಅನುಭೋಗದಾರರು ಆಸ್ತಿ ತೆರಿಗೆಯನ್ನು ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!