ಶಿವಮೊಗ್ಗದಲ್ಲಿ ಹೇಗಿತ್ತು ಫಸ್ಟ್ ವೀಕೆಂಡ್ ಕರ್ಫ್ಯೂ, ಎಲ್ಲೆಲ್ಲಿ ಏನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಕರೆ ನೀಡಿದ್ದ ವೀಕೆಂಡ್ ಕರ್ಫ್ಯೂಗೆ ಜಿಲ್ಲಾದ್ಯಂತ ಸಾರ್ವಜನಿಕರಿಂದ ಪೂರ್ಣ ಬೆಂಬಲ ಸಿಕ್ಕಿದೆ. ಬೆಳಗ್ಗೆ 10 ಗಂಟೆಯ ಬಳಿಕ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಘೋಷಿತವಾಗಿ ಬಂದ್ ಮಾಡಿದರು.

VIDEO REPORT 

ಬೆಳಗ್ಗೆ 6 ಗಂಟೆಯಿಂದ ತರಕಾರಿ ಮತ್ತು ನಂದಿನಿ ಹಾಲಿನ ಮಳಿಗೆಗಳನ್ನು ತೆರೆಯಲಾಗಿತ್ತು. 8ರ ಬಳಿಕ ದಿನಸಿ ಅಂಗಡಿಗಳನ್ನು ತೆರೆಯಲಾಗಿತ್ತು. ಕರ್ಫ್ಯೂ ಹಿನ್ನೆಲೆ ಸಾರ್ವಜನಿಕರು ಶುಕ್ರವಾರ ರಾತ್ರಿಯೇ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದರು. ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ತೆರೆಯಲಾಗಿತ್ತು.

READ |
ಬಡಾವಣೆಯ ಅಂಗಡಿಗಳು ತೆರೆದಿದ್ದವು. ಗಾಂಧಿ ಬಜಾರ್ ಸಂಪೂರ್ಣ ಸ್ತಬ್ಧವಾಗಿತ್ತು. ನಗರದ ಎಲ್ಲ ರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಬೆಳಗ್ಗೆ ನೀಡಲಾಗಿದ್ದ ಕಾಲಾವಧಿಯಲ್ಲೂ ನಿರೀಕ್ಷೆಯಷ್ಟು ವಾಹನಗಳು ರಸ್ತೆಗಿಳಿಯಲಿಲ್ಲ. ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ವಿರಳವಾಗಿತ್ತು. ಜತೆಗೆ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಬೆರೆಳಣಿಕೆಯಷ್ಟಿತ್ತು.
ಡಿಸಿ, ಎ.ಎಸ್.ಪಿ ನಗರ ಸಂಚಾರ | ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ನಗರ ಸಂಚಾರ ಮಾಡಿದರು. ಪೊಲೀಸ್ ಇಲಾಖೆಯಿಂದ ಮಾಡಲಾಗಿರುವ ವ್ಯವಸ್ಥೆಯನ್ನು ಖುದ್ದು ಭೇಟಿ ನೀಡಿ ವೀಕ್ಷಿಸಿದರು. ಅನಗತ್ಯವಾಗಿ ಓಡಾಡುವವರಿಗೆ ಎಚ್ಚರಿಕೆ ನೀಡಲಾಯಿತು.
ಹೆಚ್ಚುವರಿ ಎಸ್.ಪಿ. ಡಾ.ಎಚ್.ಟಿ ಶೇಖರ್, ಡಿ.ವೈ.ಎಸ್.ಪಿ ಪ್ರಶಾಂತ್, ದೊಡ್ಡಪೇಟೆ ಠಾಣೆ ಸಿಪಿಐ ಹರೀಶ್ ಪಾಟೀಲ್ ನಗರದ ವಿವಿಧೆಡೆ ಭೇಟಿ ನೀಡಿದರು.
ಅನಗತ್ಯವಾಗಿ ಬೈಕ್ ನಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಕಾರಿನಲ್ಲಿ ಓಡಾಡುತ್ತಿದ್ದವರನ್ನು ಹಿಡಿದು ವಿಚಾರಿಸಿದರು. ಬಿ.ಎಚ್.ರಸ್ತೆಗೆ ಬ್ಯಾರಿಕ್ಯಾಡ್ ಹಾಕಲಾಗಿತ್ತು.

https://www.suddikanaja.com/2021/04/23/shivamogga-is-ready-for-weekend-curfew/

error: Content is protected !!