ಹೇಗಿರಲಿದೆ ವೀಕೆಂಡ್ ಕರ್ಫ್ಯೂ, ಏನಿರುತ್ತೆ, ಏನಿರಲ್ಲ? ಗೊಂದಲ ಬೇಡ, ಇದನ್ನು ಓದಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ಹಲವು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಕಫ್ರ್ಯೂ ಕೂಡ ಒಂದು. ಎರಡನೇ ಅಲೆಯ ಮೊದಲ ಕಫ್ರ್ಯೂಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪೊಲೀಸ್ ಇಲಾಖೆ ಕೂಡ ಕಟ್ಟುನಿಟ್ಟಿನಿಂದ ಕ್ರಮ ವಹಿಸಲು ಮುಂದಾವಿದೆ.

VIDEO REPORT

ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ವೀಕೆಂಡ್ ಕಫ್ರ್ಯೂ ಜಾರಿಯಾಗಲಿದ್ದು, ಸೋಮವಾರ ಬೆಳಗಿನ ಜಾವ 6 ಗಂಟೆಯವರೆಗೆ ಇದು ಜಾರಿಯಲ್ಲಿರಲಿದೆ.
ಏನಿರುತ್ತೆ | ವೀಕೆಂಡ್ ಕರ್ಫ್ಯೂ ದಿನಗಳಂದು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ರೆಸ್ಟೋರೆಂಟ್ ಗಳಿಗೆ ಪಾರ್ಸಲ್ ವ್ಯವಸ್ಥೆ, ಮನೆಯ ಅಕ್ಕಪಕ್ಕ ಇರುವ ದಿನಸಿ ಅಂಗಡಿ, ನಂದಿನಿ ಮಿಲ್ಕ್ ಸ್ಟಾಲ್ ತೆರೆಯಲು ಅವಕಾಶವಿದೆ. ಆದರೆ, ಅದಕ್ಕೆ ಸಮಯದ ಮಿತಿ ಇದ್ದು, ಬೆಳಗ್ಗೆ 10 ಗಂಟೆಗೆ ಬಂದ್ ಮಾಡತಕ್ಕದ್ದು. ಜತೆಗೆ, ಮದುವೆಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. 50 ಜನರಷ್ಟೇ ಪಾಲ್ಗೊಂಡು, ಕೋವಿಡ್ ಮಾರ್ಗಸೂಚಿ ಅನ್ವಯ ವಿವಾಹ ಮಾಡಿಕೊಳ್ಳಬಹುದು.

READ | ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಳಗ್ಗೆಯಿಂದಲೇ ಕೆಲವು ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸರು

ಇದರ ಹೊರತು ಬೆಳಗ್ಗೆ 10ರ ಬಳಿಕ ಎಲ್ಲವೂ ಬಂದ್ ಇರಲಿದೆ. ಯಾರೂ ಅನಗತ್ಯವಾಗಿ ಓಡಾಡುವಂತಿಲ್ಲ. ಅಂಗಡಿಗಳನ್ನೂ ತೆರೆಯುವಂತಿಲ್ಲ. ಇದನ್ನು ಎಲ್ಲರೂ ಕಟ್ಟುನಿಟ್ಟಿನಿಂದ ಪಾಲಿಸಬೇಕಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮನವಿ ಮಾಡಿದ್ದಾರೆ.

error: Content is protected !!