ಒಂದೇ ದಿನ 17 ಮಂದಿ ಸಾವು, ಶಿವಮೊಗ್ಗ, ಸಾಗರ, ಹೊಸನಗರದಲ್ಲಿ ಕೊರೊನಾ ಕೇಕೆ, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ರಣಕೇಕೆ ಭಾನುವಾರ ಮತ್ತೆ 17 ಜನರನ್ನು ಬಲಿ ಪಡೆದಿದೆ.
857 ಮಂದಿಗೆ ಕೊರೊನಾ ಸೋಂಕು ತಗುಲಿದೆ.‌ ಇದರಲ್ಲಿ 44 ವಿದ್ಯಾರ್ಥಿಗಳು, 8 ಸಿಬ್ಬಂದಿ ಇದ್ದಾರೆ. ಚಿಕಿತ್ಸೆ ಪಡೆದು 748 ಜನ ಗುಣಮುಖರಾಗಿದ್ದಾರೆ.‌
ಸಕ್ರಿಯ ಪ್ರಕರಣದಲ್ಲಿ ಏರಿಕೆ | ಜಿಲ್ಲೆಯಲ್ಲಿ ನಿರಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 4,597ಕ್ಕೆ‌ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 537, ಡಿಸಿಎಚ್‌ಸಿನಲ್ಲಿ 143, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 117, ಖಾಸಗಿ ಆಸ್ಪತ್ರೆಯಲ್ಲಿ 452, ಹೋಂ ಐಸೋಲೇಷನ್‌ ನಲ್ಲಿ 3,025, ಟ್ರಿಯೇಜ್‌ ನಲ್ಲಿ 323 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ ಇಂದು ಅತಿ ಹೆಚ್ಚು 265, ಭದ್ರಾವತಿ 34, ಶಿಕಾರಿಪುರ 43, ತೀರ್ಥಹಳ್ಳಿ 129, ಸೊರಬ 62, ಸಾಗರ 192, ಹೊಸನಗರ 111, ಬಾಹ್ಯ ಜಿಲ್ಲೆಯ 21 ಜನರಲ್ಲಿ ಸೋಂಕು ಪತ್ತೆಯಾಗಿದೆ.

error: Content is protected !!