ಕೊರೊನಾದಿಂದ ಮೃತಪಟ್ಟವರ ಹೆಣ ಸಾಗಿಸಲು ಹೆಚ್ಚು ಹಣ ಕೇಳಿದರೆ ಆಂಬ್ಯುಲೆನ್ಸ್ ಸೀಜ್, ದರ ಪಟ್ಟಿ ಪಾಲನೆ ಕಡ್ಡಾಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾದಿಂದ ಮೃತಪಟ್ಟವರ ಹೆಣ ಸಾಗಿಸಲು ಸಂಬಂಧಿಕರಿಂದ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿವೆ. ಇದು ಹೀಗೆಯೇ ಮುಂದುವರಿದರೆ ಅಧಿಕ ಹಣ ಪಡೆದ ಆಂಬ್ಯುಲೆನ್ಸ್ ಗಳನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

READ | ಕೊರೊನಾದಿಂದ ಗುಣಮುಖರಾದ ಸರ್ಟಿಫಿಕೇಟ್ ಸಿಕ್ಕರಷ್ಟೇ ಸೋಂಕಿತ ವ್ಯಕ್ತಿ ರಿಲೀಸ್, ಎಂ.ಎಲ್.ಎ ಫೋನ್ ಮಾಡಿದರೂ ಸೋಂಕಿತರನ್ನು ಬಿಡದಿರಲು ವಾರ್ನಿಂಗ್

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಿಂದ ಶಿಕಾರಿಪುರಕ್ಕೆ 26 ಸಾವಿರ ರೂಪಾಯಿವರೆಗೆ ಹಣ ವಸೂಲಿ‌ಮಾಡುತ್ತಿರುವ ಬಗ್ಗೆ ಆರೋಪಗಳು‌ ಕೇಳಿಬಂದಿವೆ. ಇದನ್ನು ನಿಯಂತ್ರಿಸುವುದಕ್ಕೆ ಖಡಕ್ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಂಬ್ಯುಲೆನ್ಸ್ ಮಾಲೀಕರಿಗೆ ಪಿಪಿಇ ಕಿಟ್ | ಕೆಲ ಖಾಸಗಿ ಆಂಬ್ಯುಲೆನ್ಸ್ ನವರು ಪಿಪಿಇ ಕಿಟ್‌ ಕಾರಣವೊಡ್ಡಿ ಅಧಿಕ ಹಣ ಪಡೆಯುತ್ತಿದ್ದಾರೆ. ಈ‌ ಕಾರಣಕ್ಕಾಗಿ, ಆಂಬ್ಯುಲೆನ್ಸ್ ನವರಿಗೆ ಹೆಣದೊಂದಿಗೆ ನಾಲ್ಕು ಪಿಪಿಇ ಕಿಟ್ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಇನ್ನು ಮುಂದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ನಿಗದಿಪಡಿಸಿದ ದರವನ್ನೇ ಪಡೆಯಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಿಸಿ ಶಿವಕುಮಾರ್, ಎಸ್.ಪಿ‌ಲಕ್ಷ್ಮೀಪ್ರಸಾದ್, ಎಡಿಸಿ ಅನುರಾಧ ಉಪಸ್ಥಿತರಿದ್ದರು.

https://www.suddikanaja.com/2021/05/17/ambulance-asking-heavy-amount-to-transport-dead-body/

error: Content is protected !!