ಕಂಪ್ಲೀಟ್ ಲಾಕ್ ಡೌನ್ ಮುನ್ನಾ ದಿನ ಭರ್ಜರಿ ಕೇಸ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಂಪ್ಲೀಟ್ ಲಾಕ್ ಡೌನ್ ಮುನ್ನಾ ದಿನವಾದ ಭಾನುವಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಲಾಕ್‌ ಡೌನ್‌ ನಿಯಮ ಉಲ್ಲಂಘನೆ ಮಾಡಿದ 297 ದ್ವಿ ಚಕ್ರ ವಾಹನಗಳು, 7 ಆಟೋಗಳು ಮತ್ತು 14 ಕಾರು ಸೇರಿ ಒಟ್ಟು 318 ವಾಹನಗಳನ್ನು ಸೀಜ್ ಮಾಡಲಾಗಿದೆ.
ಐಎಂವಿ ಕಾಯ್ದೆ ಅಡಿ ಒಟ್ಟು 189 ಪ್ರಕರಣಗಳನ್ನು ದಾಖಲಿಸಿ 86,600 ರೂಪಾಯಿ ದಂಡವನ್ನು ವಿಧಿಸಲಾಗಿದೆ.
ನಿಯಮ ಉಲ್ಲಂಘಿಸಿದ ಅಂಗಡಿಯ ಮಾಲೀಕರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 1, ಭದ್ರಾವತಿ ಓಲ್ಡ್‌ ಟೌನ್‌ ಪೊಲೀಸ್‌ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.

error: Content is protected !!