ಲಾಕ್ ಡೌನ್ ನಡುವೆಯೂ ಇಂದು ಕೊರೊನಾ ಸೋಂಕು ಏರಿಕೆ, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ನಡುವೆಯೂ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಗುರುವಾರ ಪಾಸಿಟಿವ್ ಪ್ರಮಾಣ ಮತ್ತೆ ಏರಿಕೆಯಾಗಿದೆ.

READ | ಕಂಟೈನ್ಮೆಂಟ್ ಜೋನ್‍ಗಳಲ್ಲಿ ಟಫ್ ರೂಲ್ಸ್ ಜಾರಿ, 10ಕ್ಕಿಂತ ಹೆಚ್ಚು ಪಾಸಿಟಿವ್ ಇದ್ದ ಪ್ರದೇಶದಿಂದ ಸಂಚಾರವೇ ನಿರ್ಬಂಧ, ನಕಲಿ ವೈದ್ಯರ ವಿರುದ್ಧ ಖಡಕ್ ಕ್ರಮ

ಇಂದು 927 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 33 ವಿದ್ಯಾರ್ಥಿಗಳು, 1 ಸಿಬ್ಬಂದಿ ಇದ್ದಾರೆ. 847 ಜನ ಗುಣಮುಖರಾಗಿದ್ದಾರೆ. 7 ಜನ ಮೃತಪಟ್ಟಿದ್ದಾರೆ.
ಜಿಲ್ಲೆಯ ಶಿವಮೊಗ್ಗ, ಸಾಗರ, ಭದ್ರಾವತಿ, ಹೊಸನಗರದಲ್ಲಿ ಪ್ರಕರಣಗಳ ಆರ್ಭಟ ಮುಂದುವರಿದಿದೆ.
2,479 ಮಾದರಿಯನ್ನು ಪಡೆದಿದ್ದು, 1,744 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 639 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 314, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,260, ಖಾಸಗಿ ಆಸ್ಪತ್ರೆಯಲ್ಲಿ 1,336, ಹೋಮ್ ಐಸೋಲೇಷನ್‌ ನಲ್ಲಿ 2,929, ಟ್ರಿಯೇಜ್‌ ನಲ್ಲಿ 864 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 255, ಭದ್ರಾವತಿ 115, ತೀರ್ಥಹಳ್ಳಿ 79, ಶಿಕಾರಿಪುರ 114, ಹೊಸನಗರ 104, ಸೊರಬ 69, ಬಾಹ್ಯ ಜಿಲ್ಲೆಯ 37 ಪ್ರಕರಣಗಳಿವೆ.

https://www.suddikanaja.com/2021/04/30/covid-desth-case-increase-in-shivamogga/

error: Content is protected !!