ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ವಿಠಲ ನಗರದ ಮನೆಯೊಂದರಲ್ಲಿ ಪಶ್ಚಿಮ ಬಂಗಾಳದಿಂದ ತಂದಿದ್ದ ಗಾಂಜಾ ಮಾರಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಐದು ಜನರನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ಮಾಲ್ಡ್ ನಿವಾಸಿ ಅಲೋಕ್ ಮಂಡಲ್(34), ಕೂಚ್ ಬಿಹಾರ್ ನಿವಾಸಿಗಳಾದ ಬಾಷ್ ಸರ್ಕಾರ್(20), ಅಮ್ರಿತ್ ಮಂಡಲ್(27), ಹರಧನ್ ಮಂಡಲ್(32) ಹಾಗೂ ಗೊಸಾನಿಮರಿ ಸಂಕರ್ ಬ್ಯಾಪಾರಿ (27) ಎಂಬುವವರನ್ನು ಬಂಧಿಸಲಾಗಿದೆ.
READ | ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲೇ ರೌಡಿಶೀಟರ್ ಹತ್ಯೆ
30 ಸಾವಿರ ರೂ. ಮೌಲ್ಯದ ಒಣ ಗಾಂಜಾ ಸೀಜ್
ಪಶ್ಚಿಮ ಬಂಗಾಳದಿಂದ ತಂದು ತೀರ್ಥಹಳ್ಳಿಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಅಂದಾಜು 30,000 ರೂಪಾಯಿ ಮೌಲ್ಯದ ಒಟ್ಟು 1 ಕೆಜಿ 564 ಗ್ರಾಂ ತೂಕದ ಒಣ ಗಾಂಜಾ, 5 ಮೊಬೈಲ್, 3,550 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.
ಯಾರೋ 5 ರಿಂದ 6 ಜನ ವ್ಯಕ್ತಿಗಳು ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಡಿಎಸ್.ಪಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://suddikanaja.com/2021/10/12/ganja-sale-at-rotary-chitagara-four-accused-arrested/