ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಫೋಟ, ಶಿವಮೊಗ್ಗ, ಭದ್ರಾವತಿ, ಸಾಗರ ಡೇಂಜರ್ ಜೋನ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎರಡನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಸಲ ಒಂದೇ ದಿನ 1596 ಪ್ರಕರಣಗಳು ದೃಢಪಟ್ಟಿವೆ. 915 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 10 ಜನರನ್ನು ಕೊರೊನಾ ಬಲಿ‌ ಪಡೆದಿದೆ.

https://www.suddikanaja.com/2021/05/09/full-power-to-police-in-lock-down/

2,020 ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,546 ವರದಿಗಳು ನೆಗೆಟಿವ್ ಬಂದಿವೆ. ಜತೆಗೆ, ಇದೇ ಮೊದಲ ಸಲ ಒಂದೇ ದಿನ 81 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 23 ಕಾಲೇಜು ಸಿಬ್ಬಂದಿಗೂ ಕೊರೊನಾ ವೈರಸ್ ಅಟ್ಯಾಕ್ ಮಾಡಿದೆ.
ಸಕ್ರಿಯ ಪ್ರಕರಣದಲ್ಲಿ ಏರಿಕೆ | ಜಿಲ್ಲೆಯಲ್ಲಿ ನಿರಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 6,044ಕ್ಕೆ‌ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 556, ಡಿಸಿಎಚ್‌ಸಿನಲ್ಲಿ 172, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 234, ಖಾಸಗಿ ಆಸ್ಪತ್ರೆಯಲ್ಲಿ 460, ಹೋಂ ಐಸೋಲೇಷನ್‌ ನಲ್ಲಿ 3,770, ಟ್ರಿಯೇಜ್‌ ನಲ್ಲಿ 852 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ ಸೋಂಕು ಸ್ಫೋಟಗೊಂಡಿದ್ದು, 484 ಜನರಲ್ಲಿ ಪಾಸಿಟಿವ್ ಬಂದಿದೆ. ಭದ್ರಾವತಿ 290, ಶಿಕಾರಿಪುರ 158, ತೀರ್ಥಹಳ್ಳಿ 123, ಸೊರಬ 144, ಸಾಗರ 260, ಹೊಸನಗರ 95, ಬಾಹ್ಯ ಜಿಲ್ಲೆಯ 42 ಜನರಲ್ಲಿ ಸೋಂಕು ಪತ್ತೆಯಾಗಿದೆ.

https://www.suddikanaja.com/2021/05/10/corona-positive-cases-increase-in-shivamogga-2/

error: Content is protected !!