ಶಿವಮೊಗ್ಗದಲ್ಲಿ ಮುಂದುವರಿದ ಕೊರೊನಾ ಆರ್ಭಟ, 15 ಜನರ ಸಾವು, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನಲ್ಲಿ ಮಂಗಳವಾರ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಇನ್ನುಳಿದ ತಾಲೂಕುಗಳಲ್ಲಿ ಸ್ವಲ್ಪ‌ಮಟ್ಟಿಗೆ ಪಾಸಿಟಿವ್ ಪ್ರಮಾಣ ಇಳಿಕೆಯಾಗಿದೆ.

READ |ಮಗನಿಂದ ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟ ಕುಟುಂಬ, ಕೊನೆಗೆ ಮಗನನ್ನೂ ಬಲಿ ಪಡೆದ ಕೊರೊನಾ

ಶಿವಮೊಗ್ಗ ತಾಲೂಕುವೊಂದರಲ್ಲೇ 330 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ, ಭದ್ರಾವತಿಯಲ್ಲಿ 164, ಶಿಕಾರಿಪುರ 125, ತೀರ್ಥಹಳ್ಳಿ 13, ಸೊರಬ 37, ಸಾಗರ 31, ಹೊಸನಗರ 38 ಹಾಗೂ ಬಾಹ್ಯ ಜಿಲ್ಲೆಯ 37 ಜನ ಸೋಂಕಿಗೆ ಗುರಿಯಾಗಿದ್ದಾರೆ.
775 ಮಂದಿಗೆ ಸೋಂಕು | 775 ಜನರಿಗೆ ಕೊರೊನಾ ಪಾಸಿಡಿವ್ ಬಂದಿದೆ. ಅದರಲ್ಲಿ 26 ವಿದ್ಯಾರ್ಥಿಗಳು ಮತ್ತು 9 ಕಾಲೇಜು ಸಿಬ್ಬಂದಿ ಇದ್ದಾರೆ. 647 ಜನ ಗುಣಮುಖರಾಗಿದ್ದಾರೆ.
ಕೊರೊನಾ ಮರಣ ಮೃದಂಗ ಮುಂದುವರಿದಿದ್ದು, ಮಂಗಳವಾರ 15 ಜನ ಮೃತಪಟ್ಟಿದ್ದಾರೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಜಿಲ್ಲೆಯಲ್ಲಿ ಒಟ್ಟು 6,956 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ 586, ಡಿಸಿಎಚ್‌ಸಿನಲ್ಲಿ 231, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 467, ಖಾಸಗಿ ಆಸ್ಪತ್ರೆಯಲ್ಲಿ 544, ಹೋಮ್ ಐಸೋಲೇಷನ್‌ನಲ್ಲಿ 4,282, ಟ್ರಿಯೇಜ್‌ನಲ್ಲಿ 846 ಜನರಿದ್ದಾರೆ.

https://www.suddikanaja.com/2021/05/07/corona-death-increase-in-shivamogga/

error: Content is protected !!