ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ, ಜಿಲ್ಲೆಯಲ್ಲಿ ಒಂದೇ ದಿನ 15 ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಜಿಲ್ಲೆಯಲ್ಲಿ ಬುಧವಾರ ಅತಿ ಹೆಚ್ಚು 263 ಪ್ರಕರಣಗಳು ದೃಢಪಟ್ಟಿವೆ. ಇನ್ನುಳಿದಂತೆ ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿನ ನಿರಂತರವಾಗಿದೆ.

https://www.suddikanaja.com/2021/02/02/increase-in-number-of-family-disputes-in-shivamogga-at-covid-time/

ಬುಧವಾರ 709 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇದ್ದು, ಅದರಲ್ಲಿ 27 ವಿದ್ಯಾರ್ಥಿಗಳು, 12 ಸಿಬ್ಬಂದಿ ಇದ್ದಾರೆ. 209 ಜನ ಗುಣಮುಖರಾಗಿದ್ದಾರೆ.
ಮುಂದುವರಿದ ಸಾವು | ಸಾವಿನ ಸರಣಿ ಮುಂದುವರಿದಿದೆ. ಇಂದು 15 ಮಂದಿಯನ್ನು ಕೊರೊನಾ ಬಲಿ ಪಡೆದಿದೆ.
4 ಸಾವಿರ ಸನಿಹ ಸಕ್ರಿಯ ಪ್ರಕರಣ | ಸಕ್ರಿಯ ಪ್ರಕರಣಗಳ ಸಂಖ್ಯೆ 4 ಸಾವಿರ ಸನಿಹಿಸಿದೆ. ಮೆಗ್ಗಾನ್ ನಲ್ಲಿ 509‌ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 86, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 118, ಖಾಸಗಿ ಆಸ್ಪತ್ರೆಯಲ್ಲಿ 361, ಹೋಮ್ ಐಸೋಲೇಷನ್‌ ನಲ್ಲಿ 361, ಟ್ರಿಯೇಜ್‌ ನಲ್ಲಿ 21 ಜನ ಸೋಂಕಿತರಿದ್ದಾರೆ. ಒಟ್ಟು 3,989 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ತಾಲೂಕುವಾರು ವರದಿ | ಶಿವಮೊಗ್ಗ 241, ಭದ್ರಾವತಿ 263, ಶಿಕಾರಿಪುರ 14, ತೀರ್ಥಹಳ್ಳಿ 42, ಸೊರಬ 31, ಸಾಗರ 42, ಹೊಸನಗರ 49, ಹೊರ ಜಿಲ್ಲೆಯ 27 ಪ್ರಕರಣಗಳಿವೆ.

https://www.suddikanaja.com/2020/12/17/increase-in-covid-active-cases-in-shivamogga/

error: Content is protected !!