Shimoga airport | ಶಿವಮೊಗ್ಗದಿಂದ ಹೈದ್ರಾಬಾದ್, ಗೋವಾ, ತಿರುಪತಿಗೆ ವಿಮಾನ ಹಾರಾಟಕ್ಕೆ ಹೊಸ ಡೇಟ್ ಬಿಡುಗಡೆ, ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ

SHIVAMOGGA HYD FLIGHT

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಿಂದ ದೇಶದ ಪ್ರಮುಖ ಮೂರು ನಗರಗಳಾದ ಹೈದ್ರಾಬಾದ್ (Hyderabad), ಗೋವಾ  (Goa) ಮತ್ತು ತಿರುಪತಿ(Tirupati)ಗೆ ವಿಮಾನ ಹಾರಾಟ ಸಂಬಂಧ ಸ್ಟಾರ್ ಏರ್ (Star Air) ಹೊಸ ದಿನಾಂಕ ಬಿಡುಗಡೆಗೊಳಿಸಿದೆ. ಅದರಂತೆ. ನವೆಂಬರ್ 21ರಿಂದ ವಿಮಾನ ಹಾರಾಟ ಆರಂಭಿಸುವುದಾಗಿ ತಿಳಿಸಲಾಗಿದೆ.

one click many news logoಬಿ.ವೈ.ರಾಘವೇಂದ್ರಮಲೆನಾಡಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ಮುಂದೆ ಶಿವಮೊಗ್ಗ ವಿಮಾನ ನಿಲ್ದಾಣದಿಂದಲೇ ನೀವು ನೇರವಾಗಿ ಗೋವಾ, ಹೈದ್ರಾಬಾದ್ ಹಾಗೂ ತಿರುಪತಿಗೆ ಸಂಚರಿಸಬಹುದು. ನವೆಂಬರ್ 21 ರಿಂದ ಈ ಮೂರೂ ಸ್ಥಳಗಳಿಗೆ ತನ್ನ ವಿಮಾನ ಸಂಚಾರ ಆರಂಭಿಸುವುದಾಗಿ ಸ್ಟಾರ್ ಏರ್ ಲೈನ್ಸ್ ಅಧಿಕೃತವಾಗಿ ಘೋಷಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ.
ಬಿ.ವೈ.ರಾಘವೇಂದ್ರ, ಸಂಸದ

READ | ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಶಿವಮೊಗ್ಗದ ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ? ಈ ಸಲದ ಇನ್ನೊಂದು ವಿಶೇಷವೇನು?

ವಿಮಾನ ಸಂಚಾರದ ವೇಳಾಪಟ್ಟಿ (CLICK HERE FOR FLIGHT SCHEDULE)

  • ಹೈದ್ರಾಬಾದ್-ಶಿವಮೊಗ್ಗ: ಬೆಳಗ್ಗೆ 9.30 ಗಂಟೆಗೆ ಹೊರಟು 10.35 ಕ್ಕೆ ತಲುಪಲಿದೆ. ಈ ವಿಮಾನವು (ಮಂಗಳವಾರ, ಬುಧವಾರ, ಗುರುವಾರ, ಶನಿವಾರ) ಮಾತ್ರ ಸಂಚರಿಸಲಿದೆ.
  • ಶಿವಮೊಗ್ಗ- ಹೈದ್ರಾಬಾದ್: ಸಂಜೆ 4.30 ಗಂಟೆಗೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ. ಇದು (ಮಂಗಳವಾರ, ಬುಧವಾರ, ಗುರುವಾರ, ಶನಿವಾರ) ಮಾತ್ರ ಸಂಚರಿಸಲಿದೆ. ಬುಧವಾರ ಸಂಜೆ ಶಿವಮೊಗ್ಗದಿಂದ ಹೊರಡುವ ವಿಮಾನವು ಹೈದ್ರಾಬಾದಿಗೆ ಉಳಿದ ಮೂರು ದಿನಗಳಿಗಿಂತ 10 ನಿಮಿಷ ಮುಂಚೆ ತಲುಪಲಿದೆ.
  • ಶಿವಮೊಗ್ಗ- ಗೋವಾ: ಮಧ್ಯಾಹ್ನ 1.55 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಗೋವಾ ತಲುಪಲಿದೆ. (ಮಂಗಳವಾರ, ಗುರುವಾರ, ಶನಿವಾರ) ಸಂಚರಿಸಲಿದೆ. ಬುಧವಾರದಂದು ಮಾತ್ರ ಬೆಳಗ್ಗೆ 11 ಗಂಟೆಗೆ ಹೊರಟು 11.50ಕ್ಕೆ ಗೋವಾ ತಲುಪಲಿದೆ.
  • ಗೋವಾ- ಶಿವಮೊಗ್ಗ: ಗೋವಾದಿಂದ ಮಧ್ಯಾಹ್ನ 3.15 ಗಂಟೆಗೆ ಹೊರಟು ಸಂಜೆ 4.05 ಗಂಟೆಗೆ ಶಿವಮೊಗ್ಗ ತಲುಪಲಿದೆ. (ಮಂಗಳವಾರ, ಗುರುವಾರ, ಶನಿವಾರ) ಸಂಚರಿಸಲಿದೆ. ಬುಧವಾರದಂದು ಗೋವಾದಿಂದ 12.20 ಗಂಟೆಗೆ ಹೊರಟು 1.10ಕ್ಕೆ ಶಿವಮೊಗ್ಗ ತಲುಪಲಿದೆ.
  • ಶಿವಮೊಗ್ಗ- ತಿರುಪತಿ: ಶಿವಮೊಗ್ಗದಿಂದ ಬೆಳಗ್ಗೆ
    11 ಗಂಟೆಗೆ ಹೊರಟು ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ. ಈ ಸೇವೆಯು (ಮಂಗಳವಾರ, ಗುರುವಾರ, ಶನಿವಾರ) ಲಭ್ಯ ಇರಲಿದೆ. ಬುಧವಾರದದಂದು ಶಿವಮೊಗ್ಗದಿಂದ ತಿರುಪತಿಗೆ ಮಧ್ಯಾಹ್ನ 1.40ಕ್ಕೆ ಹೊರಟು 2.35 ಗಂಟೆಗೆ ತಲುಪುವುದು.
  • ತಿರುಪತಿ- ಶಿವಮೊಗ್ಗ: ತಿರುಪತಿಯಿಂದ ಮಧ್ಯಾಹ್ನ 12.35 ಗಂಟೆಗೆ ಹೊರಡಲಿದೆ. ಮಧ್ಯಾಹ್ನ 1.40 ಗಂಟೆಗೆ ಶಿವಮೊಗ್ಗಕ್ಕೆ ತಲುಪುವುದು. ಈ ಸೇವೆಯು (ಮಂಗಳವಾರ, ಗುರುವಾರ, ಶನಿವಾರ) ಲಭ್ಯ ಇರಲಿದೆ. ಬುಧವಾರ ಮಾತ್ರ ಸಂಜೆ 3.05 ಗಂಟೆಗೆ ಹೊರಟು 4.55ಕ್ಕೆ ಶಿವಮೊಗ್ಗ ತಲುಪಲಿದೆ.

ಟಿಕೆಟ್ ದರವೆಷ್ಟು?
ಶಿವಮೊಗ್ಗದಿಂದ ಮೂರು ಬೃಹತ್ ನಗರಗಳಿಗೆ ವಿಮಾನಯಾನ ಸೇವೆಯನ್ನು ನೀಡುತ್ತಿರುವ ಸ್ಟಾರ್ ಏರ್ ಸಂಸ್ಥೆಯು ಒಬ್ಬರಿಗೆ ಆರಂಭಿಕ ದರ 1900 ರೂ. ನಿಗದಿಪಡಿಸಿದೆ.

error: Content is protected !!