ಶಿವಮೊಗ್ಗದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ, 13 ಜನ ಸಾವು, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಕೆಯಾಗಿತ್ತು. ಆದರೆ, ಶನಿವಾರ ಮತ್ತೆ ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆಯಾಗಿದೆ.

READ | ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು ಗೊತ್ತಾ?

714 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 36 ವಿದ್ಯಾರ್ಥಿಗಳು, 10 ಕಾಲೇಜು ಸಿಬ್ಬಂದಿ ಇದ್ದಾರೆ. 427 ಜನ ಗುಣಮುಖರಾಗಿದ್ದಾರೆ.
ಕೊರೊನಾ 13 ಜನರನ್ನು ಬಲಿ ಪಡೆದಿದ್ದು, ಇದುವರೆಗೆ ಸಾವಿನ ಸಂಖ್ಯೆ 478 ಆಗಿದೆ. 1732 ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದು, 849 ನೆಗೆಟಿವ್ ಬಂದಿದೆ. 577 ಜನ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಡಿಸಿಎಚ್.ಸಿಯಲ್ಲಿ 135, ಕೋವಿಡ್ ಕೇರ್ ಸೆಂಟರ್ ನಲ್ಲಿ 113, ಖಾಸಗಿ ಆಸ್ಪತ್ರೆಯಲ್ಲಿ 411, ಹೋಮ್ ಐಸೋಲೇಷನ್ ನಲ್ಲಿ 2975, ಟ್ರಿಯೇಜ್ ನಲ್ಲಿ 277 ಸೇರಿ ಒಟ್ಟು 4,488 ಸಕ್ರಿಯ ಪ್ರಕರಣಗಳಿವೆ.

READ | ಭದ್ರಾವತಿಯಲ್ಲಿ ಅಡಕೆ ಕಳ್ಳರ ಬಂಧನ, ಕದ್ದ ಅಡಕೆ ಎಷ್ಟು ಗೊತ್ತಾ?

ತಾಲೂಕುವಾರು ವರದಿ | ಶಿವಮೊಗ್ಗ 310, ಭದ್ರಾವತಿ 36, ಶಿಕಾರಿಪುರ 39, ತೀರ್ಥಹಳ್ಳಿ 99, ಸೊರಬ 67, ಸಾಗರ 137, ಹೊಸನಗರ 2, ಬಾಹ್ಯ ಜಿಲ್ಲೆಯ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

https://www.suddikanaja.com/2021/04/20/bhadravathi-man-dead-due-to-covid/

error: Content is protected !!