ಭದ್ರಾವತಿ, ಶಿವಮೊಗ್ಗದ ಕಂಟೈನ್ಮೆಂಟ್ ಜೋನ್ ಗಳಿಗೆ ಡಿಸಿ ಭೇಟಿ, ಸ್ಥಳಿಯರ ಅಭಿಮತ‌ ಸಂಗ್ರಹ, ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯ ವಿವಿಧೆಡೆ ಸೋಮವಾರ ಭೇಟಿ ನೀಡಿ ಅಲ್ಲಿಯ ಕಂಟೈನ್ಮೆಂಟ್ ಜೋನ್ ಗಳನ್ನು ವೀಕ್ಷಿಸಿದರು. ಮಾಡಲಾಗಿರುವ ವ್ಯವಸ್ಥೆಗಳನ್ನು ಪರೀಶೀಲಿಸಿದರು.

https://www.suddikanaja.com/2021/05/27/tough-rules-in-containment-zone-by-district-administration/

ಕಂಟೈನ್ಮೆಂಟ್ ಜೋನ್ ನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಗಮನ ಹರಿಸಬೇಕು. ಜತೆಗೆ, ಹೋಮ್ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ಇಡಬೇಕು ಎಂದು ಸೂಚನೆ ನೀಡಿದರು.
ಎಲ್ಲೆಲ್ಲಿ ಭೇಟಿ | ಶಿವಮೊಗ್ಗ ತಾಲೂಕಿನ ಕಂಟೈನ್ನ್ಮೆಂಟ್ ಜೋನ್ ಗಳಾದ ಮುಳುಕೆರೆ, ಬಿದರೆ, ಪಿಳ್ಳಂಗೆರೆ, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಅರಹತೊಳಲು, ಅರಬಿಳಚಿ, ಕೂಡ್ಲಿಗೆರೆ, ಭದ್ರಾವತಿ ನಗರದ ಹೊಸಮನೆ, ಶಿವಾಜಿ ಸರ್ಕಲ್, ಉಜ್ಜನಿ ಪುರ ಮುಂತಾದ ಕಡೆಗಳಲ್ಲಿ ಭೇಟಿ‌ ನೀಡಿದರು.

ಜನರಿಂದ ಅಭಿಮತ ಸಂಗ್ರಹ | ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಪಿಡಿಒಗಳಿಂದ ಲಾಕ್ ಡೌನ್ ಮತ್ತು ಕಂಟೈನ್ಮೆಂಟ್ ಜೋನ್ ಕುರಿತು ಚರ್ಚಿಸಿದರು. ಕೊರೊನಾ ಚಿಕಿತ್ಸೆ ಪಡೆಯುವಲ್ಲಿ ಸ್ಥಳೀಯರ ಅಭಿಮತ ಹೇಗಿದೆ, ಆರೋಗ್ಯ, ವಸತಿ ಮತ್ತು ಆಹಾರದ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.

ಉಜ್ಜನಿಪುರದ ಪ್ರೈಮರಿ ಹೆಲ್ತ್ ಸೆಂಟರ್ ಗೆ ಭೇಟಿ ನೀಡಿ ಆರೋಗ್ಯದ ದೃಷ್ಟಿಯಿಂದ ಅವಶ್ಯಕತೆ ಪೂರೈಸಲು ಪಿಎಚ್.ಸಿ ಸಿಬ್ಬಂದಿ ಜತೆ ಚರ್ಚಿಸಿದರು. ತದ ನಂತರ ಸದರನ್ ಗ್ಯಾಸ್ ಏಜೆನ್ಸಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

https://www.suddikanaja.com/2021/05/27/police-complaint-against-violation-rule-in-containment-zone/

error: Content is protected !!