ಸುದ್ದಿ ಕಣಜ.ಕಾಂ
ಹೊಸನಗರ: ಕೊರೊನಾ ಮಹಾಮಾರಿ ಒಂದೇ ದಿನ ಇಬ್ಬರು ಸಹೋದರಿಯರನ್ನು ಬಲಿ ಪಡೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಪಟ್ಟಣದ ಕ್ರಿಷ್ಚಿಯನ್ ಕಾಲೊನಿಯ ವ್ಯಾನಿ ಗೋನ್ಸಾಲ್ವಿಸ್ (59), ಅಪ್ಲಿನಾ ಗೋನ್ಸಾಲ್ವಿಸ್ (50) ಮೃತಪಟ್ಟಿದ್ದಾರೆ.
ಎರಡು ಗಂಟೆಗಳ ಅಂತರದಲ್ಲಿ ಸಾವು | ಇತ್ತೀಚೆಗೆ ಕೊರೊನಾ ಪಾಸಿಟಿವ್ ಬಂದಿದ್ದ ಇವರು ಚಿಕಿತ್ಸೆಗೆ ಒಳಪಟ್ಟಿದ್ದರು. ಆದರೆ, ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಹೀಗಾಗಿ, ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಎರಡು ಗಂಟೆ ಅಂತರದಲ್ಲಿ ಮೃತಪಟ್ಟಿದ್ದಾರೆ.