ಖಾಕಿ‌ ಬಂದೋಬಸ್ತ್ ನಲ್ಲಿ ಸಿಗಂದೂರಿನಲ್ಲಿನ ಹೋಟೆಲ್, ಕಟ್ಟಡಗಳು ಪುಡಿ ಪುಡಿ

 

 

ಸುದ್ದಿ ಕಣಜ.ಕಾಂ
ಸಾಗರ: ತಾಲ್ಲೂಕಿನ ಪ್ರಸಿದ್ಧ ಶಕ್ತಿ ಕೇಂದ್ರವಾದ ಶ್ರೀ‌ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಸರ್ವೆ ನಂಬರ್ 65ರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದರೆನ್ನಲಾದ ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಗಿದೆ.

READ | ಶಿವಮೊಗ್ಗದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ, 13 ಜನ ಸಾವು, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

ಕಟ್ಟಡ ಒತ್ತುವರಿ ಮಾಡಿರುವುದಾಗಿ ಆರೋಪಿಸಿ ಶಿವರಾಜ್ ತುಮರಿ, ಗೋವರ್ಧನ ಅರಬಳ್ಳಿ, ಲಕ್ಷ್ಮೀನಾರಾಯಣ ಮಂಕಳಲೆ ಎಂಬುವವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.

ಕ್ರಮವಾಗಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠವು ದೇವಸ್ಥಾನ ಹೊರತಾದ ಜಾಗವನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.

READ | ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು ಗೊತ್ತಾ?

ವರದಿ ನೀಡುವಂತೆ ಸೂಚಿಸಿದ ಹೈಕೋರ್ಟ್ | ದೇವಸ್ಥಾನ ಕಟ್ಟಡ ಹಾಗೂ ಸಂಪರ್ಕಿಸುವ ರಸ್ತೆ ಹೊರತು ಪಡಿಸಿ ದೇವಸ್ಥಾನದ ಎದುರು ನಿರ್ಮಿಸಿದ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ವರದಿ ನೀಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯು ಸಹಕರಿಸಲು ಆದೇಶ ನೀಡಿತ್ತು. ಮುಂದುವರೆದ ಭಾಗವಾಗಿ ಉಚ್ಚ ನ್ಯಾಯಾಲಯದ ಆದೇಶದಂತೆ ಪೊಲೀಸರ ನೇತೃತ್ವದಲ್ಲಿ ಹೋಟೆಲ್ ಹಾಗೂ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಜೆಸಿಬಿ ಸಹಾಯದಿಂದ ತೆರವು ಮಾಡಲಾಗಿದೆ.
ಬಿಗಿ ಬಂದೋಬಸ್ತ್ | ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

https://www.suddikanaja.com/2020/12/03/communal-clash-in-shivamogga-gandhi-bazar/

error: Content is protected !!