ಅಗ್ನಿ ಅನಾಹುತ, ಲಾರಿಯಲ್ಲಿನ ಟೈಯರ್ ಬೆಂಕಿಗೆ ಆಹುತಿ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ವೀರಾಪುರ ರಸ್ತೆಯಲ್ಲಿ ಭಾನುವಾರ ಲಾರಿಯೊಂದಕ್ಕೆ ವಿದ್ಯುತ್ ತಂತಿ ತಗುಲಿ ಟೈಯರ್ ಬೆಂಕಿಗೆ ಆಹುತಿಯಾಗಿವೆ.

READ | ಬ್ಲ್ಯಾಕ್ ನಲ್ಲಿ ಆಕ್ಸಿಜನ್ ಮಾರಾಟ ಮಾಡುತ್ತಿದ್ದ 2 ಕಂಪೆನಿಗಳ ವಿರುದ್ಧ ಬಿತ್ತು ಕೇಸ್

ಭಾರಿ ಪ್ರಮಾಣದ ಟೈಯರ್ ಹೊತ್ತ ಲಾರಿಯು ಆಲೆ ಮನೆಗೆ ಹೋಗುತಿತ್ತು ಎಂದು ತಿಳಿದುಬಂದಿದೆ. ಆದರೆ, ಲಾರಿಯ ಮೇಲೆ ಹೊದಿಸಲಾಗಿದ್ದ ಟಾರ್ಪಲ್ ಗೆ ವಿದ್ಯುತ್ ತಂತಿ ತಾಕಿ ಅಗ್ನಿ ಅವಘಡ ಸಂಭವಿಸಿದೆ.
ಬೆಂಕಿ ನಂದಿಸಲು ಸಾಹಸ | ಸ್ಥಳೀಯರ‌ ಸಹಕಾರದೊಂದಿಗೆ ಬೆಂಕಿ‌ ನಂದಿಸಲು ಯತ್ನಿಸಲಾಗಿದೆ. ಜತೆಗೆ, ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ‌ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೈಯರ್ ಸುಟ್ಟು ಕರಕಲಾಗಿದ್ದು, ಲಾರಿಯ ಕೆಲ ಭಾಗ ಹಾಳಾಗಿವೆ.

error: Content is protected !!