ತುಂಗಾ ನದಿ ಪಾತ್ರದ ನಿವಾಸಿಗಳಿಗೆ ಹೈ ಅಲರ್ಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಜನೂರು ಜಲಾಶಯ ಭರ್ತಿ ಆಗುವುದಕ್ಕೆ ಇನ್ನು 10 ಇಂಚು ಮಾತ್ರ ಬಾಕಿ ಇದೆ. ಹೀಗಾಗಿ, ನದಿ ಪಾತ್ರದ ಮತ್ತು ನಾಲೆ ಪಾತ್ರಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

READ | ಮಳೆಗಾಲಕ್ಕೂ ಮುನ್ನವೇ ಗಾಜನೂರು ಡ್ಯಾಂ ನಿಂದ ನೀರು ಹೊರಕ್ಕೆ, ಮಳೆ ಮುಂದುವರಿದರೆ ಹೆಚ್ಚಲಿದೆ ಹೊರ ಹರಿವು

ಮುಂಬರುವ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಕೂಡ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಅನ್ವಯ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಗೆ ಈಗಾಗಲೇ ಶಿವಮೊಗ್ಗ ನಗರದ ಹಲವು ತಗ್ಗು ಪ್ರದೇಶ, ಬಡಾವಣೆಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

error: Content is protected !!