ಶಿವಮೊಗ್ಗ ನಗರದ ಎಲ್ಲ‌ ರಸ್ತೆಗಳಲ್ಲಿ ಪೊಲೀಸರು, ಬಿಗಿ ಭದ್ರತೆ, ಎಲ್ಲೆಲ್ಲಿ ಖಾಕಿ ಕಾವಲು?, ಟ್ರಾಫಿಕ್ ಸ್ಟೇಷನ್ ಮುಂದೆ ಆಟೋಗಳ ಕ್ಯೂ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಎಲ್ಲ ರಸ್ತೆಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಪೊಲೀಸರ ಬಿಗಿ ಬಂದೋಬಸ್ತ್ ಇದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಖಾಕಿ‌ ಕಾವಲು ಇದೆ.

READ | ಕೋವಿಡ್ ಪಾಸಿಟಿವ್ ಇದ್ಯಾ? ಭಯ ಬೇಡ, ಶಿವಮೊಗ್ಗದಲ್ಲಿ ಆರಂಭವಾಗಲಿದೆ ‘ಟೆಲಿಮೆಡಿಸಿನ್ ಕೇಂದ್ರ’, ಏನಿದರ ಪ್ರಯೋಜನ

ಲಾಕ್ ಡೌನ್ ನಿಮಯ ಉಲ್ಲಂಘನೆ ಮಾಡುವವರ ವಿರುದ್ಧ‌ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುತ್ತಿದೆ. ದ್ವಿಚಕ್ರ ವಾಹನ, ಕಾರು, ಆಟೋ ಎಲ್ಲವುಗಳನ್ನು ತಡೆದು ವಿಚಾರಣೆ ಮಾಡಲಾಗುತ್ತಿದೆ. ಅನಗತ್ಯವಾಗಿ ಓಡಾಡುವುದು ಕಂಡುಬಂದಲ್ಲಿ ಅಂತವರ ಮೇಲೆ ದಂಡ ವಿಧಿಸಲಾಗುತ್ತಿದೆ.

ಎಲ್ಲೆಲ್ಲಿ ಖಾಕಿ‌ ಕಾವಲು | ಗೋಪಿ ವೃತ್ತ, ನೆಹರೂ ರಸ್ತೆ, ಅಮೀರ್ ಅಹ್ಮದ್ ವೃತ್ತ, ಗಾಂಧಿ ಬಜಾರ್, ಅಶೋಕ‌ ವೃತ್ತ, ಕುವೆಂಪು ರಸ್ತೆ, ಮಹಾವೀರ ವೃತ್ತ, ಕೋರ್ಟ್ ಸರ್ಕಲ್, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಆಲ್ಕೋಳಾ ವೃತ್ತ ಹೀಗೆ ಎಲ್ಲ‌ ಕಡೆ ಪೊಲೀಸರ ಬಿಗು ಬಂದೋಬಸ್ತ್ ಇದೆ.
ಠಾಣೆಯ ಮುಂದೆ ಆಟೋಗಳ‌ ಸರದಿ | ಪಶ್ಚಿಮ ಸಂಚಾರ ನಿಯಂತ್ರಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಆಟೊ ಮತ್ತು ಬೈಕ್ ಗಳು ನಿಂತಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗುತ್ತಿದೆ.

https://www.suddikanaja.com/2021/04/28/tight-lockdown-in-shivamogga/

error: Content is protected !!