ಭದ್ರಾವತಿಗೆ ಬರಲಿದ್ದಾರೆ ಜಗದೀಶ್ ಶೆಟ್ಟರ್, ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯ ವಿಐಎಸ್.ಎಲ್ ಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಲಿದ್ದಾರೆ.
ಆಕ್ಸಿಜನ್ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಶೆಟ್ಟರ್ ಅವರು ಮೇ 6ರಂದು ವಿ.ಐ.ಎಸ್.ಎಲ್‌ ಘಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಘಟಕದ ಉನ್ನತೀಕರಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.‌

READ | ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ, ಜಿಲ್ಲೆಯಲ್ಲಿ ಒಂದೇ ದಿನ 15 ಸಾವು

ಪ್ರತಿ ದಿನ 320 ಕೆಎಲ್‍.ಡಿ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಈ ಆಕ್ಸಿಜನ್ ಘಟಕಕ್ಕೆ ಇದೆ. ಉತ್ಪಾದಿಸಿದ ಆಕ್ಸಿಜನ್ ವಿ.ಐ.ಎಸ್.ಎಲ್ ತಮ್ಮಲ್ಲಿರುವ ಜಂಬೋ ಸಿಲಿಂಡರ್ ಗಳ ಮೂಲಕ ಬಾಟ್ಲಿಂಗ್ ಮಾಡಲಿದೆ. ನಿತ್ಯ ಕೇವಲ 8 ಕೆಎಲ್‍.ಡಿ ಆಕ್ಸಿಜನ್ ಮಾತ್ರ ಬಾಟ್ಲಿಂಗ್ ಮಾಡುವ ಸಾಮರ್ಥ್ಯ ಇಲ್ಲಿದ್ದು, ಲಿಕ್ವಿಡ್ ಆಕ್ಸಿಜನ್ ಆಗಿ ಪರಿವರ್ತಿಸುವ ತಾಂತ್ರಿಕ ವ್ಯವಸ್ಥೆ ಇಲ್ಲಿರುವುದಿಲ್ಲ. ಈ ಬಗ್ಗೆಯೂ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

error: Content is protected !!