ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಬಲಿ ಪಡೆದ ಕೊರೊನಾ, ಮುಗಿಲು ಮುಟ್ಟಿದ ಆಕ್ರಂದನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆಗೆ ಕೊರೊನಾ ಶುಕ್ರವಾರ ಬಲಿ ಪಡೆದಿದೆ.

READ | ಕೋವಿಡ್ ಹಿನ್ನೆಲೆ ರೆಡ್ ಜೋನ್‍ನಲ್ಲಿ 15 ಗ್ರಾಮ ಪಂಚಾಯಿತಿಗಳು, ಜೂನ್ 7ರ ವರೆಗೆ ಲಾಕ್‍ಡೌನ್, ಪಂಚಾಯಿತಿ ಪಟ್ಟಿ ಇಲ್ಲಿದೆ

ಮಲವಗೊಪ್ಪದ ಪೂಜಾ ಎಂಬುವವರೇ ಮೃತರು. ಮೇ 24ರಂದು ಹರಿಗೆ ನಿವಾಸಿ ಮಹೇಶ್ ಜತೆ ವಿವಾಹ ನೆರವೇರಿದೆ. ಮದುವೆಯಾದ ಮಾರನೇ ದಿನವೇ ಪೂಜಾಗೆ ಜ್ವರ ಕಾಣಿಸಿಕೊಂಡಿದೆ. ತಕ್ಷಣ ಖಾಸಗಿ ಕ್ಲಿನಿಕ್ ವೊಂದಕ್ಕೆ ಇವರನ್ನು ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಸೋಂಕು ಉಲ್ಬಣವಾಗಿದೆ. ಇನ್ನೇನು ಹೆಚ್ಚುವರಿ ಚಿಕಿತ್ಸೆಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗಲೇ ಪೂಜಾ ಮಾರ್ಗ ಮಧ್ಯೆ ಅಸು ನೀಗಿದ್ದಾರೆ. ನವ ವಿವಾಹಿತ ಜೋಡಿಗಳ ಖುಷಿಯನ್ನು ಕ್ರೂರಿ ಕೊರೊನಾ ಕಸಿದಿದೆ.

error: Content is protected !!