ಬಾಲ ಮಂದಿರದ ಏಳು ಮಕ್ಕಳಿಗೆ ಕೊರೊನಾ ಪಾಸಿಟಿವ್, ಸೋಂಕು ತಗುಲಿದ್ದು ಹೇಗೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಆಲ್ಕೋಳದಲ್ಲಿರುವ ಬಾಲ ಮಂದಿರದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದೆ.
ಬಾಲ ಮಂದಿರದಲ್ಲಿರುವ ಏಳು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ.

READ | ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಬಲಿ ಪಡೆದ ಕೊರೊನಾ 

ಇಲ್ಲಿ 14 ಮಕ್ಕಳಿದ್ದು, ಅದರಲ್ಲಿ ಮೂವರಿಗೆ ಎರಡು ದಿನಗಳ ಹಿಂದೆ ಕೊರೊನಾ ದೃಢಪಟ್ಟಿದೆ. ಬಳಿಕ ನಾಲ್ವರಿಗೆ ನಂಜು ತಗುಲಿದೆ. ಬಾಲ ಮಂದಿರವನ್ನು ಸೀಲ್ ಡೌನ್ ಮಾಡಲಾಗಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ಸ್ಟೀಕರ್ ಅಂಟಿಸಿದ್ದಾರೆ.

READ | ಕುಡಿಯುವ ನೀರಿನ ದೋಷದಿಂದಲೂ ಹರಡಲಿದೆ ಬ್ಲ್ಯಾಕ್ ಫಂಗಸ್

ನಂಜು ತಗುಲಿದ್ದು ಎಲ್ಲಿಂದ | ಬಾಲ ಮಂದಿರದಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಕೊರೊನಾ ಹಿನ್ನೆಲೆ ಎಲ್ಲಿಯೂ ಹೊರಗೆ ಬಿಡುತ್ತಿಲ್ಲ. ಶಾಲೆಗೂ ರಜೆ ಇರುವುದರಿಂದ ಹೊರಗಿನ ಜನರ ಸಂಪರ್ಕವೇ ಇವರಿಗಿಲ್ಲ. ಆದರೆ, ಇಲ್ಲಿಗೆ ಬರುತ್ತಿದ್ದ ಸಿಬ್ಬಂದಿಯೊಬ್ಬರಿಂದ ಸೋಂಕು ಮಕ್ಕಳಿಗೆ ತಗುಲಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!