ಕೊರೊನಾ ಲಸಿಕೆ ಅಭಾವ, ಕೆಲಸ ಬಿಟ್ಟು ಬಂದವರು ವಾಪಸ್, ಸರಿಯಾದ ಮಾಹಿತಿ ಇಲ್ಲದೇ ಜನರ ಪರದಾಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಲಸಿಕೆ ಅಭಾವ ಮತ್ತೆ ತಲೆ ದೋರಿದೆ. ಶನಿವಾರವೇ ಲಸಿಕೆ ಮುಗಿದಿದ್ದು, ಜನ ಕೇಂದ್ರಗಳಿಗೆ ಬಂದ್ ವಾಪಸ್ ಹೋಗುತ್ತಿದ್ದಾರೆ.
ಜಿಲ್ಲಾಡಳಿತ ಲಸಿಕೆಗೇನೂ ಕೊರತೆ ಇಲ್ಲ ಎಂದು ಹೇಳುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಜನರಿಗೆ ಸರಿಯಾಗಿ ಮಾಹಿತಿ ಇಲ್ಲದೇ ಲಸಿಕೆ ಕೇಂದ್ರಗಳಿಗೆ ಭಾನುವಾರ ಸಹ ಬಂದು ಹೋಗುತಿದ್ದಾರೆ.

READ | ಹಾಲು, ತರಕಾರಿ, ದಿನಸಿ ಖರೀದಿಯ ಸಮಯ ಬದಲಾಯಿಸಿ ಆದೇಶ, ಮೇ 2ರಿಂದ ಅನ್ವಯ

ಶನಿವಾರವಂತೂ ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಲಸಿಕೆಯಿಲ್ಲದೇ ಸಾರ್ವಜನಿಕರ ನಡುವೆ ನೂಕುನುಗ್ಗಲು ಏರ್ಪಟ್ಟಿತ್ತು. ಅಧಿಕಾರಿಗಳು ಸಮಾಧಾನ ಮಾಡಿ ಕಳುಹಿಸಿದ್ದಾರೆ.
ಡಿ.ಎಚ್.ಒ ಕಚೇರಿ ಪಕ್ಕದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಲಭ್ಯವಿಲ್ಲವೆಂಬ ಬೋರ್ಡ್ ಹಾಕಿದ್ದಾರೆ. ತುಂಗಾನಗರದಲ್ಲೂ ಲಸಿಕೆ ಲಭ್ಯವಿಲ್ಲ. ಜನರು ಬೆಳಗ್ಗೆಯಿಂದ ಬಂದು ವಾಪಸಾಗುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಕಂಪೆನಿಯಿಂದಲೇ ಲಸಿಕೆ ಪೂರೈಕೆ | ನಗರದಲ್ಲಿ ಗುರುತಿಸಲಾಗಿರುವ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. ಅಲ್ಲಿಯೂ ಲಸಿಕೆ ಪೂರೈಕೆ ಆಗದೇ ಇರುವುದರಿಂದ ಕೇಂದ್ರಗಳನ್ನು ಬಂದ್ ಮಾಡಲಾಗಿದೆ.

READ | ಶಿವಮೊಗ್ಗದಲ್ಲಿ ದಾಖಲಾಯ್ತು ಕನಿಷ್ಠ ತಾಪಮಾನ, ಸಂಜೆಯಿಂದ ದಿಢೀರ್ ಮಳೆ

ಈ ಮುಂಚೆ ಆರೋಗ್ಯ ಇಲಾಖೆಯೇ ಲಸಿಕೆಗಳನ್ನು ಪೂರೈಕೆ ಮಾಡುತಿತ್ತು. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಂಪೆನಿಗಳೇ ಇನ್ಮುಂದೆ ಖಾಸಗಿಯವರಿಗೆ ಲಸಿಕೆಗಳನ್ನು ನೇರವಾಗಿ ತಲುಪಿಸಲಿವೆ.

error: Content is protected !!