ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ಸಾಗಿಸಬೇಕಾದರೆ ಅದಕ್ಕೆ ಪೂರಕ ದಾಖಲೆಗಳು ಜೊತೆಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಅಂತಹ ಹಣವನ್ನು ಸೀಜ್ ಮಾಡುವ ಬಗ್ಗೆ ಚುನಾವಣೆ ಆಯೋಗ ಸೂಚನೆಯ ನಂತರವೂ ಯಾವುದೇ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ನಗದು, ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
READ | ಶಿವಮೊಗ್ಗದ್ದು ಯಾವ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ, ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ
ಎಲ್ಲೆಲ್ಲಿ ಎಷ್ಟು ಹಣ ಸೀಜ್?
- ಶಿಕಾರಿಪುರ-115 ಮತ ಕ್ಷೇತ್ರ ವ್ಯಾಪ್ತಿಯ ಕವಾಸ್’ಪುರ ಚೆಕ್ ಪೋಸ್ಟ್ ನಲ್ಲಿ ಹನುಮಂತಪ್ಪ ಎಂಬುವವರು ದಾಖಲೆ ಇಲ್ಲದೆ ಹೊಂದಿದ್ದ 73,736 ರೂ.ಗಳನ್ನು ಎ.ಎಸ್.ಟಿ ತಂಡ ವಶಪಡಿಸಿಕೊಂಡಿದೆ.
- ಭದ್ರಾವತಿ-112 ಮತಕ್ಷೇತ್ರ ವ್ಯಾಪ್ತಿಯ ಹಳ್ಳಿಕೆರೆ ಚೆಕ್ ಪೋಸ್ಟ್ ನಲ್ಲಿ ರಾಮು ಮತ್ತು ಕೆ.ತೀರ್ಥಕುಮಾರ್ ಎಂಬುವವರು ಹೊಂದಿದ್ದ 1,25,000 ರೂ.ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.
- ಸಾಗರ-117 ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಊಟವನ್ನು ಸರಬರಾಜು ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪಕ್ಷದ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
- ಶಿರಾಳಕೊಪ್ಪ-ಚಿತ್ರದಹಳ್ಳಿ ರಸ್ತೆ ಮಧ್ಯೆ ವಾಹನ ತಪಾಸಣೆ ಮಾಡುವ ವೇಳೆ ಸೊರಬ ವಾಸಿ ಮುನ್ನೀರ್ ಎಂಬವವರು ದಾಖಲೆ ಇಲ್ಲದೆ ವಾಹನದಲ್ಲಿ 1,50,000 ರೂ.ಗಳನ್ನು ಸಾಗಿಸುತ್ತಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ.
24 ಲೀಟರ್ ಮದ್ಯ ವಶ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟವನ್ನು ಪರಿಶೀಲಿಸಲಾಗುತ್ತಿದ್ದು ಮಾ.27ರಂದು ಪೆÇಲೀಸ್ ಇಲಾಖೆ ವತಿಯಿಂದ 1336.38 ರೂ. ಮೊತ್ತದ 3.81 ಲೀ., ಅಬಕಾರಿ ಇಲಾಖೆಯಿಂದ 9487 ರೂ. ಮೊತ್ತದ 21.14 ಲೀ ಒಟ್ಟು 10823.68 ರೂ. ಮೌಲ್ಯದ 24.95 ಲೀ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.