ಶಿವಮೊಗ್ಗದಲ್ಲಿ 2 ಶಂಕಿತ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ, ಜನರಲ್ಲಿ ಭೀತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಬ್ಬರು ಕೊರೊನಾ ಪಾಸಿಟಿವ್ ಇರುವ ವ್ಯಕ್ತಿಗಳಲ್ಲಿ ಶಂಕಿತ ಬ್ಲ್ಯಾಕ್ ಫಂಗಸ್ ಇರುವುದು ಗೊತ್ತಾಗಿದೆ.
ಕೊರೊನಾ ಪಾಸಿಟಿವ್ ಇದ್ದ ಕಾರಣ ಚಿಕಿತ್ಸೆಗೋಸ್ಕರ ಮೆಗ್ಗಾನ್ ನಲ್ಲಿ ದಾಖಲಾಗಿದ್ದಾರೆ.

READ | ಬ್ಲ್ಯಾಕ್ ಫಂಗಸ್ ಹರಡುವಿಕೆ ತಡೆಗೆ ಶಿವಮೊಗ್ಗ ಸಿದ್ಧ, ಡಿಸಿ ನೀಡಿರುವ ನಿರ್ದೇಶನಗಳೇನು?

ಆ ವೇಳೆ, ಬ್ಲ್ಯಾಕ್ ಫಂಗಸ್ ಗೆ ಹೋಲುವ ಲಕ್ಷಣಗಳಿರುವುದು ಪತ್ತೆಯಾಗಿದೆ. ಇದರಲ್ಲಿ ಒಬ್ಬರು ಶಿವಮೊಗ್ಗ ಮೂಲದವರಾಗಿದ್ದು, ಮತ್ತೊಬ್ಬರು ನೆರೆಯ ಜಿಲ್ಲೆಯವರಾಗಿದ್ದಾರೆ.
ಅವರ ಮಾದರಿಗಳನ್ನು ಪರೀಕ್ಷೆಗೋಸ್ಕರ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!