ಕೊರೊನಾ ಲಾಕ್‍ಡೌನ್ ನಡುವೆ ನಿಲ್ಲದ ಕಳ್ಳತನ, ಮನೆಯೊಂದರಲ್ಲಿ ಚಿನ್ನಾಭರಣ ಕಳವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ನಡುವೆ ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಸೋಮಯ್ಯ ಲೇಔಟ್‍ನಲ್ಲಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

READ | ಒಂದೇ ಬಡಾವಣೆಯಲ್ಲಿ 200 ಕೊರೊನಾ ಕೇಸ್, ಸೀಲ್ ಡೌನ್‍ಗೆ ಮುಂದಾದ ಜನ

ಶಿಕ್ಷಣ ಇಲಾಖೆಯ ಸಿಬ್ಬಂದಿ ಪ್ರಭಾಕರ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಇವರು ಪತ್ನಿ ಮತ್ತು ಮಕ್ಕಳನ್ನು ಚನ್ನಗಿರಿಗೆ ಬಿಡುವುದಕ್ಕಾಗಿ ಶುಕ್ರವಾರ ಹೋಗಿದ್ದು, ಮಂಗಳವಾರ ವಾಪಸ್ ಬಂದಿದ್ದಾರೆ. ಈ ಮಧ್ಯೆ ಕಳ್ಳರು ತನ್ನ ಕೈಚಳಕ ತೋರಿದ್ದಾರೆ.

READ | ಕೊರೊನಾ ಅಟ್ಟಹಾಸ, ಒಂದೇ ದಿನ ತಾಯಿ, ಮಗ ಸಾವು, ಮನೆಯಲ್ಲಿ ಸೂತಕದ ಛಾಯೆ

ಅಂದಾಜು 196 ಗ್ರಾಂ ಚಿನ್ನ ಕಳವು ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!