ಭದ್ರಾವತಿಯಲ್ಲಿ ಚಿನ್ನದ ಸರ ದೋಚಿದ್ದ ಮೂವರು ಆರೋಪಿಗಳು ಅರೆಸ್ಟ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಪೋಸ್ಟ್ ಆಫೀಸ್ ಗೆ ಹೋಗುವ ರಸ್ತೆಯಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ದೋಚಿದ್ದ ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

https://www.suddikanaja.com/2021/01/06/three-pdo-suspend-in-bhadravathi/

ಭದ್ರಾವತಿಯ ಎರೆಹಳ್ಳಿ ನಿವಾಸಿ ಎಸ್.ಪವನ್(19), ಸಂಜಯ ಕಾಲೋನಿ ನಿವಾಸಿ ವಿ.ವಿಷ್ಣು(19), ಹೆಬ್ಬಂಡಿ ನಿವಾಸಿ ಎಂ.ಮಹೇಶ್ ಎಂಬುವವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳಿಂದ 4.63 ಲಕ್ಷ ರೂಪಾಯಿ ಮೌಲ್ಯದ 103 ಗ್ರಾಂ ಬಂಗಾರದ ಆಭರಣ, ಕೃತ್ಯಕ್ಕೆ ಉಪಯೋಗಿಸಿದ 2 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

READ | ಶಿವಮೊಗ್ಗ, ಭದ್ರಾವತಿಗೆ ಪ್ರತ್ಯೇಕ ಲಾಕ್‍ಡೌನ್ ರೂಲ್ಸ್, ಕೆಲವು ವ್ಯಾಪಾರಕ್ಕೆ ರಿಲ್ಯಾಕ್ಸ್, ಯಾವುದಕ್ಕೆಷ್ಟು ಸಮಯ?

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಪೇಪರ್ ಟೌನ್ ಪೊಲೀಸ್ ಠಾಣೆಯ 2 ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ 2 ಸರಗಳ್ಳತನ ಪ್ರಕಣಗಳಲ್ಲಿಯೂ ಭಾಗಿಯಾಗಿದ್ದರು ಎಂಬ ವಿಷಯ ತಿಳಿದುಬಂದಿದೆ.

ಕಾರ್ಯಾಚರಣೆ ನಡೆಸಿದ ತಂಡ | ಭದ್ರಾವತಿಯ 85 ವರ್ಷದ ಲಕ್ಷ್ಮಮ್ಮ ಎಂಬುವವರು ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಬಂದ ಮೂವರು 25 ಗ್ರಾಂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದರು. ತಕ್ಷಣ ವೃದ್ಧೆಯು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 392 ಐಪಿಸಿ ರಿತ್ಯಾ ಪ್ರಕರಣ ದಾಖಲಿ ತನಿಖೆ ಆರಂಭಿಸಿದ್ದರು. ಪೇಪರ್ ಟೌನ್ ಪಿ.ಐ ನೇತೃತ್ವದಲ್ಲಿ ಪಿಎಸ್‍ಐ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

https://www.suddikanaja.com/2021/02/19/arrest-in-bhadravati/

error: Content is protected !!