ಸಲುಗೆ ಬೆಳೆಸಿಕೊಂಡು ಬಾಲಕಿಯ ಅಶ್ಲೀಲ ಫೋಟೊ ಇನ್‍ಸ್ಟಾ ಗ್ರಾಂಗೆ ಪೋಸ್ಟ್ ಮಾಡಿದ ಆರೋಪಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಸಾಗರ: ಇನ್ ಸ್ಟಾ ಗ್ರಾಂನಲ್ಲಿ ಬಾಲಕಿಯ ಅಶ್ಲೀಲ ಫೋಟೊ ಅಪ್ ಲೋಡ್ ಮಾಡಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

ಆನಂದಪುರಂ ಹೋಬಳಿಯ ಚೆನ್ನಶೆಟ್ಟಿಕೊಪ್ಪದ ಪ್ರದೀಪ್(25) ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರ ವಿದ್ಯಾರ್ಥಿನಿಯ ಅಶ್ಲೀಲ ಫೋಟೊಗಳನ್ನು ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ಶಿವಮೊಗ್ಗದ ಹಲವೆಡೆ ಜೂನ್ 25ರಂದು ಕರೆಂಟ್ ಕಟ್

ಈತ ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡು ಬಾಲಕಿಯ ಅಶ್ಲೀಲ ಚಿತ್ರಗಳನ್ನು ತೆಗೆದು ಇನ್ ಸ್ಟಾಗ್ರಾಂಗೆ ಹಾಕಿದ್ದ. ಈತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

error: Content is protected !!