ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಐದಾರು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣಕ್ಕೆ ಬ್ರೇಕ್ ಬಿದ್ದಿದೆ. ಭಾರಿ ಸಂಖ್ಯೆಯಲ್ಲಿ ಪಾಸಿಟಿವಿಟಿ ಇದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಹದ್ದುಬಸ್ತಿಗೆ ಬಂದಿದೆ.
ಇನ್ನೂರರ ಗಡಿ ಇಳಿದ ಸೋಂಕು | ಜಿಲ್ಲೆಯಲ್ಲಿ ಇಂದು 198 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ 11 ವಿದ್ಯಾರ್ಥಿಗಳು, ಒಬ್ಬರು ಸಿಬ್ಬಂದಿ ಇದ್ದಾರೆ. 516 ಜನ ಗುಣಮುಖರಾಗಿದ್ದಾರೆ. ಐದು ಜನ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 318, ಡಿಸಿಎಚ್ಸಿನಲ್ಲಿ 148, ಕೋವಿಡ್ ಕೇರ್ ಸೆಂಟರ್ನಲ್ಲಿ 811, ಖಾಸಗಿ ಆಸ್ಪತ್ರೆಯಲ್ಲಿ 455, ಹೋಮ್ ಐಸೋಲೇಷನ್ ನಲ್ಲಿ 702, ಟ್ರಿಯೇಜ್ ನಲ್ಲಿ 406 ಜನರು ಚಿಕಿತ್ಸೆ ಪಡೆಯುತ್ತಿದ್ದು, 2,840 ಸಕ್ರಿಯ ಪ್ರಕರಣಗಳಿವೆ.
https://www.suddikanaja.com/2021/06/17/corona-positivity-decline/