ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಐದಾರು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣಕ್ಕೆ ಬ್ರೇಕ್ ಬಿದ್ದಿದೆ. ಭಾರಿ ಸಂಖ್ಯೆಯಲ್ಲಿ ಪಾಸಿಟಿವಿಟಿ ಇದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಹದ್ದುಬಸ್ತಿಗೆ ಬಂದಿದೆ.
ಶನಿವಾರ ಶಿವಮೊಗ್ಗ ತಾಲೂಕಿನಲ್ಲಿ 84, ಭದ್ರಾವತಿಯಲ್ಲಿ 54, ತೀರ್ಥಹಳ್ಳಿ 5, ಶಿಕಾರಿಪುರ 14, ಸಾಗರ 21, ಹೊಸನಗರ 8, ಸೊರಬ 6 ಮತ್ತು ಬಾಹ್ಯ ಜಿಲ್ಲೆಯ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನೂರರ ಗಡಿ ಇಳಿದ ಸೋಂಕು | ಜಿಲ್ಲೆಯಲ್ಲಿ ಇಂದು 198 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ 11 ವಿದ್ಯಾರ್ಥಿಗಳು, ಒಬ್ಬರು ಸಿಬ್ಬಂದಿ ಇದ್ದಾರೆ. 516 ಜನ ಗುಣಮುಖರಾಗಿದ್ದಾರೆ. ಐದು ಜನ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 318, ಡಿಸಿಎಚ್ಸಿನಲ್ಲಿ 148, ಕೋವಿಡ್ ಕೇರ್ ಸೆಂಟರ್ನಲ್ಲಿ 811, ಖಾಸಗಿ ಆಸ್ಪತ್ರೆಯಲ್ಲಿ 455, ಹೋಮ್ ಐಸೋಲೇಷನ್ ನಲ್ಲಿ 702, ಟ್ರಿಯೇಜ್ ನಲ್ಲಿ 406 ಜನರು ಚಿಕಿತ್ಸೆ ಪಡೆಯುತ್ತಿದ್ದು, 2,840 ಸಕ್ರಿಯ ಪ್ರಕರಣಗಳಿವೆ.
https://www.suddikanaja.com/2021/06/17/corona-positivity-decline/