Power cut | ಭಾನುವಾರ, ಸೋಮವಾರ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ, ಎಲ್ಲೆಲ್ಲಿ ಪವರ್ ಕಟ್?

POWER CUT 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಹಲವೆಡೆ ಮೇ 18 ಮತ್ತು 19ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

READ | ಹಸಿರುಮಕ್ಕಿ‌ ಲಾಂಚ್ ಸ್ಥಗಿತ,  ಜನರಿಗೆ 40 ಕಿಮೀ ಹೆಚ್ಚುವರ ಪ್ರಯಾಣದ ಶಾಕ್

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಎಂ.ಆರ್.ಎಸ್. ಶಿವಮೊಗ್ಗದ 110/11 ಕೆವಿ ವಿವಿ ಕೇಂದ್ರದಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವುದರಿಂದ ಮೇ 19 ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಎಂ.ಆರ್.ಎಸ್. ಎಫ್-3 ಫೀಡರ್ ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

18ರಂದು ವಿದ್ಯುತ್ ವ್ಯತ್ಯಯ

SHIMOGA: ಕುಂಸಿ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಕಂಬಗಳನ್ನು ಅಳವಡಿಸುವ ಕಾಮಗಾರಿ ಇರುವುದರಿಂದ ಮೇ 18 ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಈ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಪರಿವರ್ತಕ, ಶನೇಶ್ವರ ಪರಿವರ್ತಕ, ಸೋಮಶೆಟ್ಟಿ ಕೊಪ್ಪ, ದೊಡ್ಡಕೇರಿ, ಚೆಲವಾದಿಕೇರಿ, ಮೇಕನಹಳ್ಳಿ ದಿಬ್ಬ, ಶುಭರಕೇರಿ, ಮಾವಿನಕೇರಿ, ಏಕೆ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

19ರಂದು ವಿದ್ಯುತ್ ವ್ಯತ್ಯಯ

SHIMOGA: ಎಂ.ಆರ್.ಎಸ್. ಶಿವಮೊಗ್ಗದ 220 ಕೆವಿ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 19 ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ, ಬಂಗಾಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ.ಕಾಲೋನಿ, ನವುಲೆಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

error: Content is protected !!