Cyber literacy | ಬ್ಯಾಂಕ್ ಬಳಕೆದಾರರೆ ಎಚ್ಚರ, ಇತ್ತೀಚೆಗೆ ಈ ಆ್ಯಪ್ ಡೌನ್ ಲೋಡ್ ಕೊಂಡಿದ್ದರೆ ಡಿಲೀಟ್ ಮಾಡಿ, ಇಲ್ಲಿದೆ ಪೂರ್ಣ ಮಾಹಿತಿ

Cyber crime

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಬ್ಯಾಂಕ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.
ಕೆನರಾ ಮತ್ತಿತರ ಬ್ಯಾಂಕ್ ಗಳ ಲೋಗೋ ಹೊಂದಿರುವ ನಕಲಿ ಮೊಬೈಲ್ ಅಪ್ಲಿಕೇಶನ್ (Mobile app) ಅನ್ನು ವಾಟ್ಸ್ ಆ್ಯಪ್, ಟೆಲಿಗ್ರಾಂ ಸೇರಿದಂತೆ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಕಳುಹಿಸಲಾಗುತ್ತಿದೆ.
ಕಸ್ಟಮರ್‌ ಸರ್ವಿಸ್‌ ಪಾಯಿಂಟ್‌ (ಸಿಎಸ್‌ಪಿ-CSP) ಎಂಬ ಎಪಿಕೆ ಫೈಲ್‌ (APK file) ಕಳುಹಿಸಿದ್ದು, ಅದನ್ನು ಡೌನ್ ಲೋಡ್ ಮತ್ತು ಇನ್‌ಸ್ಟಾಲ್ ಮಾಡಿಕೊಂಡು ಆಧಾರ್‌ ಕೆವೈಸಿ, ಪ್ಯಾನ್‌ ಕಾರ್ಡ್‌ ವಿವರ, ಸಿಮ್ ಕಾರ್ಡ್ ನಂಬರ್ ಅಪ್ ಡೇಟ್ ಮಾಡಿ ಎಂದು ತಿಳಿಸಲಾಗುತ್ತಿದೆ.
ಒಂದು ವೇಳೆ ಯಾರಾದರೂ ಈ ರೀತಿಯ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿ Install ಮಾಡಿದ ನಂತರ, ಸೈಬರ್ ವಂಚಕರು ವ್ಯಕ್ತಿಯ ಬ್ಯಾಂಕಿನ ಮಾಹಿತಿಯನ್ನು ಪಡೆದುಕೊಂಡು ಹಣವನ್ನು ನೇರವಾಗಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿರುತ್ತಾರೆ.

READ | ಕೆರೆ ಹೂಳು ತೆಗೆಯಲು ಜಿಲ್ಲಾಡಳಿತ ಹೊಸ ರೂಲ್ಸ್, ಏನೆಲ್ಲ ನಿಯಮಗಳನ್ನು ವಿಧಿಸಲಾಗಿದೆ?

ಇನ್ ಸ್ಟಾಲ್ ಆಗಿದ್ದರೆ ಹೀಗೆ ಮಾಡಿ

  • ಒಂದುವೇಳೆ ಸಾರ್ವಜನಿಕರು ಈ ರೀತಿಯ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿ Install ಮಾಡಿಕೊಂಡಿದ್ದಲಿ ಮೊದಲು ನಿಮ್ಮ ಮೊಬೈಲ್ ನ ಇಂಟರ್ ನೆಟ್ ಆಫ್ ಮಾಡಿ, ನಂತರ Settings ನಲ್ಲಿ app management/ APPS ಮತ್ತು ಡೌನ್‌ ಲೋಡ್ ಅನ್ನು ಪರಿಶೀಲಿಸಿ.
  • ಯಾವುದೇ unknown file ಇದ್ದರೆ ಅದನ್ನು ಡಿಲಿಟ್ ಮಾಡಿರಿ ಮತ್ತು *#67# ನಂಬರನ್ನು ಡಯಲ್ ಮಾಡಿ ಇದರಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆ ಯಾವ ಯಾವ ಸರ್ವಿಸ್ ಗಳಿಗೆ ಫಾರ್ವಡಡ್ ಇದೆ ಅಂತ ತಿಳಿಯಲಿದೆ.
  • ಫಾರ್ವಡೆಡ್ ಆಗಿದ್ದರೆ ನಿಮ್ಮ OTP ಗಳು ಸೈಬರ್ ವಂಚಕರ ಹತ್ತಿರ ಹೋಗುತ್ತವೆ. ಆದ್ದರಿಂದ ಫಾರ್ವಡೆಡ್ ಇದ್ದವರು ಕೂಡಲೇ #002# ನಂಬರ್ ಅನ್ನು ಡಯಲ್ ಮಾಡಿದ್ದಲ್ಲಿ. ಎಲ್ಲಾ ಸರ್ವಿಸ್ ಗಳು ಡಿಸೇಬಲ್ ಆಗುತ್ತವೆ.

ಯಾವುದೇ ಬ್ಯಾಂಕ್ ನವರು ಫೋನ್/ ಅಪ್ಲಿಕೇಶನ್ ಗಳ ಮುಖಾಂತರ ತಮ್ಮ ವೈಯಕ್ತಿಕ ಮಾಹಿತಿ ಮತ್ತು ಅಕೌಂಟ್ ವಿವರಗಳನ್ನು ಕೇಳುವುದಿಲ್ಲ, ಆದ್ದರಿಂದ ಸಾರ್ವಜನಿಕರು ಯಾವುದೇ ಅನಾಮಧೇಯ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವ ಮುನ್ನ, ಅದರ ಸತ್ಯತೆಯ ಬಗ್ಗೆ ಪರಿಶೀಲಿಸಿದ ನಂತರವೇ ಬಳಸುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

error: Content is protected !!