ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಶತಕ ದಾಟಿದ ಸೋಂಕು ಇನ್ನುಳಿದ ತಾಲೂಕುಗಳ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೂರು ತಾಲೂಕುಗಳಲ್ಲಿ ಆರಂಭದಿಂದಲೂ ಕೊರೊನಾ ಸೋಂಕು ಇಳಿಮುಖವಾಗುತ್ತಲೇ ಇಲ್ಲ. ಅದರಲ್ಲಿ ಶಿವಮೊಗ್ಗ, ಭದ್ರಾವತಿಯದ್ದು ಮೇಲುಗೈಯಾದರೆ, ಸಾಗರದಲ್ಲಿ ಸೋಂಕಿನ ಸಂಖ್ಯೆ ಏರಿಳಿತ ಕಾಣುತ್ತಿದೆ.
ಭಾನುವಾರ 672 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 33 ವಿದ್ಯಾರ್ಥಿಗಳು ಮತ್ತು ನಾಲ್ಕು ಜನ ಸಿಬ್ಬಂದಿ ಇದ್ದಾರೆ. 595 ಜನ ಗುಣಮುಖರಾಗಿದ್ದಾರೆ. ಇಂದೂ ಆರು ಸೋಂಕಿತರನ್ನು ಕೊರೊನಾ ಬಲಿ ಪಡೆದಿದೆ.

ಶಿವಮೊಗ್ಗದಲ್ಲಿ 176, ಭದ್ರಾವತಿಯಲ್ಲಿ 139 ಮತ್ತು ಸಾಗರದಲ್ಲಿ 150 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದಂತೆ, ತೀರ್ಥಹಳ್ಳಿಯಲ್ಲಿ 38, ಶಿಕಾರಿಪುರದಲ್ಲಿ 99, ಹೊಸನಗರದಲ್ಲಿ 31, ಸೊರಬದಲ್ಲಿ 50 ಮತ್ತು ಬಾಹ್ಯ ಜಿಲ್ಲೆಯ 19 ಜನರಲ್ಲಿ ಪ್ರಕರಣ ದೃಢಪಟ್ಟಿವೆ.

6,650 ಸಕ್ರಿಯ ಪ್ರಕರಣಗಳು | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 615, ಡಿಸಿಎಚ್‍ಸಿನಲ್ಲಿ 353, ಕೋವಿಡ್ ಕೇರ್ ಸೆಂಟರ್‍ನಲ್ಲಿ 2,023, ಖಾಸಗಿ ಆಸ್ಪತ್ರೆಯಲ್ಲಿ 1,361, ಹೋಮ್ ಐಸೋಲೇಷನ್‍ನಲ್ಲಿ 1,580, ಟ್ರಿಯೇಜ್‍ನಲ್ಲಿ 718 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 6,650 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

https://www.suddikanaja.com/2020/12/17/increase-in-covid-active-cases-in-shivamogga/

error: Content is protected !!