ಶಿವಮೊಗ್ಗದಲ್ಲಿ ಮೊದಲ ಸಲ ನೂರರ ಕೆಳಗಿಳಿದ ಸೋಂಕಿತರ ಸಂಖ್ಯೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇದೇ ಮೊದಲ ಸಲ ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ನೂರರ ಕೆಳಗಿಳಿದಿದೆ. ಕಳೆದ ಎರಡೂವರೆ ತಿಂಗಳಿಂದ ನೂರರ ಗಡಿ ದಾಟುತಿದ್ದ ಪಾಸಿಟಿವ್ ಸಂಖ್ಯೆ ಬುಧವಾರ ಭಾರಿ ಕಡಿಮೆಯಾಗಿದೆ.

ಬುಧವಾರದಂದು ಶಿವಮೊಗ್ಗ ತಾಲೂಕಿನಲ್ಲಿ 62, ಭದ್ರಾವತಿ 29, ತೀರ್ಥಹಳ್ಳಿ 5, ಶಿಕಾರಿಪುರ 15, ಸಾಗರ 9, ಹೊಸನಗರ 4, ಸೊರಬ 5 ಮತ್ತು ಬಾಹ್ಯ ಜಿಲ್ಲೆಯ 1 ಜನರಲ್ಲಿ ಪತ್ತೆಯಾಗಿದೆ.

ಇಂದು 130 ಜನರಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿದ್ದಾರೆ. 918 ಜನರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯೂ ಹದ್ದುಬಸ್ತಿಗೆ ಬಂದಿದೆ. 4 ಜನ ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 539, ಡಿಸಿಎಚ್‍ಸಿನಲ್ಲಿ 205, ಕೋವಿಡ್ ಕೇರ್ ಸೆಂಟರ್ ನಲ್ಲಿ 1,189, ಖಾಸಗಿ ಆಸ್ಪತ್ರೆಯಲ್ಲಿ 649, ಹೋಮ್ ಐಸೋಲೇಷನ್ ನಲ್ಲಿ 937, ಟ್ರಿಯೇಜ್ ನಲ್ಲಿ 534 ಸೋಂಕಿತರಿದ್ದಾರೆ. 4,053 ಸಕ್ರಿಯ ಪ್ರಕರಣಗಳಿವೆ.

error: Content is protected !!