Indefinite strike | ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಕುಳಿತ 115 ನೌಕರರು

strike

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾಯಂಗೊಳಿಸುವುದು, ಸಮಾನ ವೇತನಕ್ಕೆ ಒತ್ತಾಯಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ 115 ನೌಕರರು ಸೋಮವಾರದಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕುಳಿತಿದ್ದಾರೆ.
ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರು ಈ ಬಜೆಟ್‌ನಲ್ಲಿ ತಮ್ಮ ಸೇವೆಗಳನ್ನು ಕಾಯಂಗೊಳಿಸಲು ಸರ್ಕಾರ ಕ್ರಮವಹಿಸುತ್ತದೆ ಎಂಬ ಆಶಾಭಾವನೆ ಹೊಂದಿತ್ತು. ಆದರೆ ರಾಜ್ಯದ ನೇರ ಪಾವತಿಯಡಿ ದುಡಿಯುತ್ತಿರುವ 24 ಸಾವಿರ ಪೌರ ಕಾರ್ಮಿಕರ ಸೇವೆಗಳನ್ನು ಮಾತ್ರ ಕಾಯಂಗೊಳಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದು, ರಾಜ್ಯ ಸಂಘವು ಇದನ್ನು ಸ್ವಾಗತಿಸುತ್ತದೆ. ಆದರೆ ಇತರ ಗುತ್ತಿಗೆ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರ ಬಗ್ಗೆ ಯಾವುದೇ ಕ್ರಮವಹಿಸದೆ ಇರುವುದು ಮಲತಾಯಿ ಧೋರಣೆ ಮತ್ತು ನ್ಯಾಯಸಮ್ಮತವಲ್ಲ ಎಂದರು.
ಫೆ.20ರಂದು ಸರ್ಕಾರಕ್ಕೆ ಮುಷ್ಕರ ನೊಟೀಸ್ ನೀಡಿ ಪತ್ರ ತಲುಪಿದ 14 ದಿನದೊಳಗೆ ನಮ್ಮ ನ್ಯಾಯಬದ್ಧವಾದ ಹಕ್ಕೊತ್ತಾಯಗಳನ್ನು ಪರಿಗಣಿಸದೆ ಹೋದಲ್ಲಿ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ತಿಳಿಸಲಾಗಿತ್ತು. ಎಂಟು ದಿನಗಳು ಈಗಾಗಲೆ ಕಳೆದಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ವಿಭಾಗದ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

READ | ಕುಂದುಕೊರತೆಗಳನ್ನು ಆಲಿಸಲು‌ ನಿಮ್ಮೂರಿಗೆ ಬರಲಿದ್ದಾರೆ ಲೋಕಾಯುಕ್ತ ಅಧಿಕಾರಿಗಳು, ಯಾವ ದಿನ ಎಲ್ಲಿ ಭೇಟಿ?

ನೌಕರರ ಬೇಡಿಕೆಗಳೇನು?

  • ಹೊರಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ಎಲ್ಲ ನೀರು ಸರಬರಾಜು ವಿಭಾಗದ ನೌಕರರ ಸೇವೆಗಳನ್ನು ವಿಶೇಷ ನೇಮಕಾತಿಯಡಿ ಕಾಯಂಗೊಳಿಸಬೇಕು.
  • ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
  • ದಿನದಲ್ಲಿ ಎಂಟು ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನುಬದ್ಧ ವೇತನ, ಸಂಬಳಸಹಿತ ವಾರದ ರಜೆ, ಹಬ್ಬಗಳ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆ ನೀಡಿ
  • ಹತ್ತಾರು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ/ ಮರಣ ಹೊಂದುವ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು/ಅವಲಂಬಿತರಿಗೆ ಉಪಧನ ನೀಡುವ ಸಂಬಂಧ ಸ್ಪಷ್ಟ ಆದೇಶವನ್ನು ಸರ್ಕಾರ ಹೊರಡಿಸಬೇಕು.
  • ಎಲ್ಲ ಹೊರಗುತ್ತಿಗೆ ನೀರು ಸರಬರಾಜು ವಿಭಾಗದ ಕಾರ್ಮಿಕರು ಅಲ್ಪವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶನ ನೀಡಬೇಕು.

ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘದ ಗೌರವಾಧ್ಯಕ್ಷ ಮೋಹನ್‌ಕುಮಾರ್, ಅಧ್ಯಕ್ಷರಾದ ನಾಗರಾಜ್ ಎಚ್.ಎಸ್., ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್, ಉಪಾಧ್ಯಕ್ಷರಾದ ಕೆ.ರಘುರಾಮ್, ಜೆ.ವಿನಯ್, ಎಲ್.ರಘು, ಪರಮೇಶ್, ವಿನಾಯಕ್ ಇತರರು ಉಪಸ್ಥಿತರಿದ್ದರು.

Today arecanut rate | 09/02/2023 ರ ಅಡಿಕೆ ಧಾರಣೆ

error: Content is protected !!