29 ಲಕ್ಷ ರೂ. ಮೌಲ್ಯದ ನೂರಾರು ಕೆಜಿ‌ ಗಾಂಜಾ ಧ್ವಂಸ,‌ ಕಾರಣವೇನು‌ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಅಂದಾಜು 29,30,310 ಮೌಲ್ಯದ ಒಟ್ಟು 637 ಕೆ.ಜಿ ಗಾಂಜಾವನ್ನು ಶನಿವಾರ ನಾಶ ಪಡಿಸಲಾಗಿದೆ.
ಅಂತರ್ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲೆಯ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳು ಮತ್ತು ಪಂಚರ ಸಮಕ್ಷಮದಲ್ಲಿ ಮಾಚೇನಹಳ್ಳಿಯಲ್ಲಿ ಗಾಂಜಾ ನಾಶ ಮಾಡಲಾಗಿದೆ.
ಮಾಚೇನಹಳ್ಳಿಯಲ್ಲಿರುವ ಶುಶ್ರೂತಾ ಬಯೋ‌ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಸೊಸೈಟಿಯ ಕಾಮನ್ ಬಯೋ‌ ಮೆಡಿಕಲ್ ವೇಸ್ಟ್ ಟ್ರೀಟ್ಮೆಂಟ್ ಆ್ಯಂಡ್ ಡಿಸ್ಪೋಸಲ್ ಫೆಸಿಲಿಟಿಯಲ್ಲಿ ನಾಶ ಪಡಿಸಲಾಗಿದೆ.

error: Content is protected !!