ಶಿವಮೊಗ್ಗದಲ್ಲಿ ಮಳೆಯ ಆರ್ಭಟ, ಗಾಜನೂರು ಡ್ಯಾಂ ನಿಂದ ಔಟ್ ಫ್ಲೋದಲ್ಲಿ ಏರಿಕೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ. ನಿರಂತರ ಸುರಿಯುತ್ತಿರುವ ವರ್ಷಧಾರೆಗೆ ಕೆರೆ ಕಟ್ಟೆಗಳು, ನದಿಗಳು ತುಂಬಿ ತುಳುಕುತ್ತಿವೆ.

READ | ವಿದ್ಯುತ್ ಶಾಕ್ ತಗುಲಿ ಸಹೋದರರಿಬ್ಬರ ದಾರುಣ ಸಾವು

ಶಿವಮೊಗ್ಗ ತಾಲೂಕುವೊಂದರಲ್ಲಿಯೇ ಕಳೆದ 24 ಗಂಟೆಗಳಲ್ಲಿ 16.4 ಎಂಎಂ ಮಳೆಯಾಗಿದೆ. ಗುರುವಾರ ಬೆಳಗ್ಗೆಯಿಂದಲೇ ನಿರಂತರ ಮಳೆಯಾಗುತ್ತಿದೆ. ಹೀಗಾಗಿ, ರಸ್ತೆಯುದ್ದಕ್ಕೂ ನೀರು ತುಂಬಿಕೊಂಡಿದೆ.
ಗಾಜನೂರು ಜಲಾಶಯದ ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೀರಿನ ಪ್ರಮಾಣದಲ್ಲಿ‌ ಏರಿಕೆಯಾಗಿದೆ.

READ | ಮುಂದುವರಿದ ಮಳೆಯ ಆರ್ಭಟ, ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ

ಗುರುವಾರ ಬೆಳಗ್ಗೆ 8 ಗಂಟೆಯವರೆಗೆ 21,500 ಕ್ಯೂಸೆಕ್ಸ್ ನೀರು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಬೆಳಗ್ಗೆ 11ರ ವರೆಗೆ 25ರಿಂದ 30 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

error: Content is protected !!