ಆರೂವರೆ ಗಂಟೆಗಳಲ್ಲಿ 31,633 ಹುರುಳಿ ಕಾಳು ಎಣಿಕೆ ಮಾಡಿ ವಿಶ್ವ ದಾಖಲೆ ಬರೆದ ಮಲೆನಾಡಿನ ಪ್ರತಿಭೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರೂವರೆ ಗಂಟೆಗಳಲ್ಲಿ 31,633 ಹುರುಳಿ ಕಾಳುಗಳನ್ನು ಎಣಿಕೆ ಮಾಡಿ ಶಿವಮೊಗ್ಗದ ಬಿ.ಮಂಜುನಾಥ್ ಸ್ವಾಮಿ ಅವರು ವಿಶ್ವ ದಾಖಲೆ ಬರೆದಿದ್ದಾರೆ.

ರಂಗಭೂಮಿ ಕಲಾವಿದರಾದ ಮಂಜುನಾಥ್ ಅವರು ಮೇ 12ರಂದು ನಡೆದ ಸಿಂಗಲ್ ಡೇ ಮ್ಯಾರಥಾನ್‍ನಲ್ಲಿ ಭಾಗವಹಿಸಿ ಒಂದು ಕೆಜಿ ಕಾಳುಗಳನ್ನು 6 ಗಂಟೆ 37 ನಿಮಿಷಗಳಲ್ಲಿ ಎಣಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
ಹೊಸ ದಾಖಲೆಯನ್ನು ಬರೆದಿದ್ದಕ್ಕೆ ವರ್ಲ್ಡ್ ರೆಕಾರ್ಡ್ ಇಂಡಿಯಾದಿಂದ ಪ್ರಶಂಸಾ ಪತ್ರ, ಪದಕವನ್ನು ನೀಡಿ ಗೌರವಿಸಲಾಗಿದೆ.

error: Content is protected !!