ಶಿವಮೊಗ್ಗದ ಹಲವೆಡೆ ಜೂನ್ 25ರಂದು ಕರೆಂಟ್ ಕಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರ ಉಪ ವಿಭಾಗ 2ರ ಘಟಕ 4ರ ವ್ಯಾಪ್ತಿಯಲ್ಲಿನ ಎಂ.ಆರ್.ಎಸ್. 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈ ಮಾಸಿಕ ಕಾಮಗಾರಿ ಇರುವ ಕಾರಣ ಜೂನ್ 25ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ | ನಗರದ ಬೆಕ್ಕಿನಕಲ್ಮಠ, ಕೋಟೆ ರಸ್ತೆ, ಮಾರಿಗದ್ದುಗೆ, ಎಂಪಿಎಂ ರಸ್ತೆ, ಒ.ಬಿ.ಎಲ್ ರಸ್ತೆ, ಪೆನ್ಶನ್ ಮೊಹಲ್ಲಾ, ಸಿ.ಎಲ್.ರಾಮಣ್ಣ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಯಾಲಕಪ್ಪನ ಕೇರಿ, ನಾಗಪ್ಪನ ಕೇರಿ, ಗಾಂಧಿ ಬಜಾರ್, ಬಿ.ಎಚ್.ರಸ್ತೆ ಎಡಭಾಗ, ಅಮೀರ್ ಅಹಮದ್ ಸರ್ಕಲ್, ಶಿವಾಜಿ ರಸ್ತೆ, ತಿರುಪಳಯ್ಯನ ಕೇರಿ, ಬಿ.ಎಚ್.ರಸ್ತೆ, ಸಾವರ್ಕರ್ ನಗರ, ಅಶೋಕ ರಸ್ತೆ, ಕುಚಲಕ್ಕಿ ಕೇರಿ, ಎಂ.ಕೆ.ಕೆ ರಸ್ತೆ, ಆನವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ದೇವಸ್ಥಾನ ಹತ್ತಿರ, ಗಾಂಧಿ ಬಜಾರ್, ಧರ್ಮರಾಯನ ಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್ 7 ಮತ್ತು ಎಫ್ 8 ಫೀಡರ್ ನಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ವಡ್ಡಿನಕೊಪ್ಪ, ಪೋದಾರ್ ಶಾಲೆ ರಸ್ತೆ, ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆ ತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಅಬ್ಬರಘಟ್ಟ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

https://www.suddikanaja.com/2021/02/11/power-cut-in-shivamogga-mescom-2/

error: Content is protected !!