GOOD NEWS | ಕಂದಾಯ ಪಾವತಿ ಅಲೆದಾಟಕ್ಕೆ‌ ಗುಡ್ ಬೈ, ಪಾಲಿಕೆಯೇ ಬರಲಿದೆ‌ ನಿಮ್ಮ ಮನೆ ಬಾಗಿಲಿಗೆ, ಮೇಯರ್‌ ರಿಂದಲೇ ಫಸ್ಟ್ ಪೇಮೆಂಟ್

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊರೊನಾ‌ ಲಾಕ್ ಡೌನ್ ಕಷ್ಟ ಕಾಲದಲ್ಲಿ ಮಹಾನಗರ ಪಾಲಿಕೆಗೆ ಬಂದು ಕಂದಾಯ ಪಾವತಿಸಲು‌ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪಾಲಿಕೆಯೇ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ!

https://www.suddikanaja.com/2020/12/20/shivamogga-city-corporation-tax-increase/

ಇಂತಹದ್ದೊಂದು ವಿಶಿಷ್ಟ ಯೋಜನೆಗೆ ಪಾಲಿಕೆ ಮುಂದಾಗಿದ್ದು, ಮೊದಲು ಮೇಯರ್ ಸುನೀತಾ ಅಣ್ಣಪ್ಪ ಅವರೇ ತಮ್ಮ‌ಕಂದಾಯ ಪಾವತಿಸಿ‌ ಮಾದರಿಯಾದರು.
ಪಾಲಿಕೆಯಲ್ಲಿ‌‌ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಮೇಯರ್ ಸುನೀತಾ ಅಣ್ಣಪ್ಪ, ಆಸ್ತಿ ತೆರಿಗೆ ಪಾವತಿಸಲು ಸಾರ್ವಜನಿಕರ ಪರದಾಟ ತಪ್ಪಿಸಲು ಹೊಸ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಅಲೆದಾಟಕ್ಕೆ‌ ಗುಡ್ ಬೈ | ಆಸ್ತಿ ತೆರಿಗೆ ಎಷ್ಟಿದೆ ಎಂಬುವುದನ್ನು ಅರಿಯಲು ಪಾಲಿಕೆಗೆ ಹೋಗಿ ಮಾಹಿತಿ ಪಡೆದು, ಅಲ್ಲಿಂದ ಬ್ಯಾಂಕ್ ಇಲ್ಲವೇ ಶಿವಮೊಗ್ಗ ಒನ್‌ಗೆ ಸುತ್ತ ಓಡಾಡಬೇಕಿತ್ತು.‌ ಇದೆಲ್ಲದಕ್ಕೂ‌ ಹೊಸ ಪಾವತಿ ವ್ಯವಸ್ಥೆ ಬ್ರೇಕ್ ಹಾಕಲಿದೆ.

READ | ಜೂನ್ 15ರ ವರೆಗೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗದ ಮಾಹಿತಿ‌ ಇಲ್ಲಿದೆ

ಹೇಗೆ ವ್ಯವಸ್ಥೆ‌ | ಪಾಲಿಕೆ ಕಂದಾಯ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬರುವರು. ಮನೆಯ ಕಂದಾಯವನ್ನು ಮನೆಯಲ್ಲಿಯೇ ಆನ್‌ಲೈನ್ ಮೂಲಕ ಕಟ್ಟಿದರೆ ಅಲ್ಲಿಯೇ ಅವರಿಗೆ ರಶೀದಿ ನೀಡಲಾಗುವುದು. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ನಗದು ಪಾವತಿಗೆ ಅವಕಾಶವಿಲ್ಲ. ಆನ್‌ಲೈನ್ ನಲ್ಲೇ ಹಣ ಪಾವತಿಸತಕ್ಕದ್ದು.
ಜೂನ್‌ 30ರವರೆಗೆ ರಿಯಾಯಿತಿ‌ | ಲಾಕ್ ಡೌನ್ ಹಿನ್ನೆಲೆ ತೆರಿಗೆ ಪಾವತಿಯ ಮೇಲೆ ರಿಯಾಯಿತಿಯನ್ನು ಜೂನ್ 30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ‌ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ಲಭಿಸಲಿದೆ ಎಂದು ಮೇಯರ್ ಹೇಳಿದರು.
ಉಪ ಮೇಯರ್ ಶಂಕರ್‌ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್ ಉಪಸ್ಥಿತರಿದ್ದರು.

https://www.suddikanaja.com/2020/11/17/digital-payment-at-fertilizer-retail-store/

error: Content is protected !!