ವಾಕಿಂಗ್ ಬಂದರೆ ಹುಷಾರ್, ಪೊಲೀಸರೇ ಮಾಡಿಸಲಿದ್ದಾರೆ ಕೊರೊನಾ‌ ಟೆಸ್ಟ್, ಪಾಸಿಟಿವ್ ಬಂದರೆ ಕೊರೊನಾ ಸೆಂಟರ್ ಗೆ ಶಿಫ್ಟ್! 2 ಗಂಟೆ ಠಾಣೆಯಲ್ಲೇ ಕಳೆದ 84 ಜನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಅಪ್ಪಿತಪ್ಪಿ ವಾಕಿಂಗ್ ಅಂತೇನಾದರೂ ಹೊರಗೆ ಬಂದರೆ ಹುಷಾರ್! ಕಾರಣ, ಪೊಲೀಸರು ಇನ್ಮುಂದೆ ಸುಮ್ಮನಿರುವುದಿಲ್ಲ.

VIDEO REPORT 

ಕ್ರೀಡಾಂಗಣ, ಉದ್ಯಾನ ಇತ್ಯಾದಿ ಸಾರ್ವಜನಿಕ ಪ್ರದೇಶಗಳಿಗೆ ವಾಕಿಂಗ್ ಅಂತೇನಾದರೂ ಬಂದರೆ ಪೊಲೀಸರು ಅಂತಹವರನ್ನು ಹಿಡಿದು ಠಾಣೆಗೆ ಕರೆದೊಯ್ಯಲಿದ್ದಾರೆ. ಅಲ್ಲಿ ರ‌್ಯಾಟ್ ಪರೀಕ್ಷೆ (ಕೊರೊನಾ ಪರೀಕ್ಷೆ) ಮಾಡಿಸಲಾಗುವುದು. ಪರೀಕ್ಷೆಯ ವರದಿ ಏನಾದರೂ ಪಾಸಿಟಿವ್ ಬಂದರೆ ಅಂತಹವರನ್ನು ಮನೆಗೆ ಕಳುಹಿಸದೇ ನೇರವಾಗಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗುವುದು. ನಂತರ, ಸಂಬಂಧಪಟ್ಟವರ ಕುಟುಂಬಕ್ಕೆ ಮಾಹಿತಿ ನೀಡಲಾಗುವುದು.

https://www.suddikanaja.com/2021/06/02/police-shock-to-public-who-came-for-walking/

ಈ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಜಾಗರೂಕತೆ ವಹಿಸುವಂತೆ ಸೂಚಿಸಿದೆ‌. ಲಾಕ್ ಡೌನ್ ವೇಳೆಯಲ್ಲಿ ಸಾರ್ವಜನಿಕ ಪ್ರದೇಶಗಳಿಗೆ ವಾಕಿಂಗ್ ಗಾಗು ಬರುವುದು ನಿಷೇಧಿಸಲಾಗಿದೆ. ಅದನ್ನು‌ ಮೀರಿ ಬಂದರೆ ಕ್ರಮ ಅನಿವಾರ್ಯವಾಗಲಿದೆ ಎಂದು ತಿಳಿಸಲಾಗಿದೆ.
ಎರಡು ಗಂಟೆ ಠಾಣೆಯಲ್ಲೇ ಕಳೆದ 84 ಜನ | ಬುಧವಾರ ಬೆಳಗ್ಗೆ ವಾಕಿಂಗ್ ಗೋಸ್ಕರ ಬಂದ ಜನರನ್ನು ಪೊಲೀಸರು ಹಿಡಿದು ಠಾಣೆಗೆ ಕರೆದುಕೊಂಡು‌ ಹೋಗಿದ್ದಾರೆ.
ಜಯನಗರ ಪೊಲೀಸ್ ಠಾಣೆ 50 ಜನ, ಕೋಟೆ ಪೊಲೀಸ್ ಠಾಣೆ 24 ಜನ ಮತ್ತು ತುಂಗಾನಗರ ಪೊಲೀಸ್ ಠಾಣೆ 10 ಜನ ಸೇರಿ ಒಟ್ಟು 84 ಜನರನ್ನು ಠಾಣೆಗಳಿಗೆ ಕರೆದುಕೊಂಡು ಹೋಗಲಾಗಿದೆ.
ಇವರುಗಳನ್ನು 2 ಗಂಟೆಗಳ ಕಾಲ ಠಾಣೆಯಲ್ಲಿಯೇ ಕೂರಿಸಿ ನಂತರ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

https://www.suddikanaja.com/2021/05/10/tight-police-security-in-shivamogga/

error: Content is protected !!