ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯೊಂದರ ವಾರ್ಡ್ ಬಾಯ್ ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಬೈಕ್‍ನಲ್ಲಿ ಬರುತ್ತಿದ್ದ ಮಂಡೇನಕೊಪ್ಪ ನಿವಾಸಿ ಹರೀಶ್ ನಾಯ್ಕ್(26) ಎಂಬಾತ ಮತ್ತೂರು ರಸ್ತೆಯಲ್ಲಿರುವ ಲಕ್ಕಪ್ಪನಹಳ್ಳದ ಚಾನಲ್ ಕಟ್ಟೆಗೆ ಬೈಕ್ ನಿಂದ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.

ಬೈಕ್ ರಸ್ತೆಯ ಮೇಲೆ ಬಿದಿದ್ದು, ಹರೀಶ್ ಶವ ಚಾನಲ್ ನಲ್ಲಿ ದೊರೆತಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!