3 ತಿಂಗಳ ಬಳಿಕ ಗಾಂಧಿ ಬಜಾರ್ ನಲ್ಲಿ ಕಿಕ್ಕಿರಿದ ಜನ, ಅಮೀರ್ ಅಹ್ಮದ್ ಸರ್ಕಲ್ ಅನ್‍ಲಾಕ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೂರು ತಿಂಗಳ ನಂತರ ಗಾಂಧಿ ಬಜಾರ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಕಿಕ್ಕಿರಿದು ತುಂಬಿದ್ದಾರೆ.

ಅನ್‍ಲಾಕ್ 1 ಹೇಗಿದೆ ಮೊದಲ ದಿನ, ಅಂಗಡಿಗಳು ತೆರೆದಿವೆಯೇ? ಮಾಹಿತಿಗಾಗಿ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ ⇓

ಜತೆಗೆ, ಲಾಕ್ ಡೌನ್ ಆದ ದಿನದಿಂದ ಅಮೀರ್ ಅಹ್ಮದ್ ವೃತ್ತವನ್ನು ಬಂದ್ ಮಾಡಲಾಗಿತ್ತು. ಆದರೆ, ಸೋಮವಾರದಿಂದ ಇದನ್ನೂ ಅನ್ ಲಾಕ್ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟವಿದೆ.

ನಗರದೆಲ್ಲೆಡೆ ಟ್ರಾಫಿಕ್ ಜಾಮ್ | ಭಾನುವಾರದವರೆಗೆ ಬಿ.ಎಚ್.ರಸ್ತೆ, ನೆಹರೂ ರಸ್ತೆಯಲ್ಲಿ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ದುರ್ಗಿಗುಡಿ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆದರೆ, ಸೋಮವಾರದಿಂದ ಎಲ್ಲ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿವೆ.
ಸ್ಮಾರ್ಟ್ ಸಿಟಿಯಿಂದ ನೆಹರೂ ರಸ್ತೆ, ಬಿ.ಎಚ್.ರಸ್ತೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ, ವಾಹನಗಳು ಸಂಚರಿಸಲಾಗದೇ ಟ್ರಾಫಿಕ್ ಜಾಮ್ ಉಂಟಾಯಿತು.

error: Content is protected !!