ಮನೆಯ ಹೆಂಚು ತೆಗೆದು ಲಕ್ಷಾಂತರ ಹಣ ಲೂಟಿ, ಊಟ ಮಾಡಿ ಬರುವ ಹೊತ್ತಿಗೆ ಹಣ ಮಾಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಊಟಕ್ಕೆಂದು ಹೋದಾಗ ಮನೆಯ ಮೇಲಿನ ಹೆಂಚು ತೆಗೆದು 5 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಆಯನೂರಿನಲ್ಲಿ ಮಂಗಳವಾರ ನಡೆದಿದ್ದು, ಬುಧವಾರ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯನೂರು ನಿವಾಸಿ ಸುನೀಲ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಸುನೀಲ್ ವ್ಯಾಪಾರದ ಹಣವನ್ನು ಲಾಕ್ ಡೌನ್ ಹಿನ್ನೆಲೆ ತಂದು ಮನೆಯಲ್ಲಿ ಇಟ್ಟುಕೊಂಡಿದ್ದ.

ಊಟ ಮಾಡುವುದಕ್ಕಾಗಿ ಹೊರಗಡೆ ಹೋದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕುಂಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!